7
ಶಾಂತಿ ಸ್ಥಾಪನೆಗೆ ಒತ್ತು, ಕಾಶ್ಮೀರ ವಿವಾದ ಪ್ರಸ್ತಾಪ

ಇಮ್ರಾನ್‌ ಖಾನ್‌ ಅವರಿಂದ ಪ್ರಣಾಳಿಕೆ ಬಿಡುಗಡೆ

Published:
Updated:
ಇಸ್ಲಾಮಾಬಾದ್‌ನಲ್ಲಿ ಮಂಗಳವಾರ ಪಕ್ಷದ ಪ್ರಣಾಳಿಕೆ ಬಿಡುಗಡೆಗೊಳಿಸಿದ ತೆಹ್ರೀಕ್‌–ಇ–ಇನ್ಸಾಫ್‌ ಪಕ್ಷದ ಮುಖ್ಯಸ್ಥ ಇಮ್ರಾನ್‌ ಖಾನ್‌ – ಎಪಿ ಚಿತ್ರ

ಇಸ್ಲಾಮಾಬಾದ್‌: ‘ವಿಶ್ವಸಂಸ್ಥೆಯ ಭದ್ರತಾ ಸಮಿತಿ (ಯುಎನ್‌ಎಸ್‌ಸಿ) ನಿರ್ಣಯಗಳಿಗೆ ಅನುಗುಣವಾಗಿ ಕಾಶ್ಮೀರ ವಿಚಾರಕ್ಕೆ ಆದ್ಯತೆ ನೀಡುವ ಮೂಲಕ ಶಾಂತಿ ಸ್ಥಾಪನೆಗೆ ಒತ್ತು ನೀಡಲಾಗುವುದು’ ಎಂದು ಪಾಕಿಸ್ತಾನ್‌ ತೆಹ್ರೀಕ್‌–ಇ–ಇನ್ಸಾಫ್‌ ಪಕ್ಷದ ಮುಖ್ಯಸ್ಥ ಇಮ್ರಾನ್‌ ಖಾನ್‌ ಅವರು ತಿಳಿಸಿದ್ದಾರೆ.

ಸಂಸತ್‌ ಚುನಾವಣೆಗೆ ‘ದಿ ರೋಡ್‌ ಟು ನಯಾ ಪಾಕಿಸ್ತಾನ್‌’ ಹೆಸರಿನ‌ ಪಕ್ಷದ ಪ್ರಣಾಳಿಕೆ ಬಿಡುಗಡೆಗೊಳಿಸಿ ಅವರು ಈ ಘೋಷಣೆ ಮಾಡಿದರು.

ಪಾಕಿಸ್ತಾನವನ್ನು  ‘ಮಾದರಿ ಇಸ್ಲಾಮಿಕ್‌ ಕಲ್ಯಾಣ ರಾಜ್ಯ’ವಾಗಿ ರೂಪಿಸುವುದಾಗಿ ತಿಳಿಸಿದ ಅವರು, 50 ಲಕ್ಷ ಮನೆ ನಿರ್ಮಾಣ ಹಾಗೂ 1 ಕೋಟಿ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡುವುದಾಗಿ ತಿಳಿಸಿದ್ದಾರೆ.

ಸ್ವಾಯತ್ತ ಪೊಲೀಸ್‌ ವ್ಯವಸ್ಥೆ ಜಾರಿಮಾಡುವುದಾಗಿ ತಿಳಿಸಿದ ಅವರು, ತ್ವರಿತಗತಿಯಲ್ಲಿ ನ್ಯಾಯದಾನ ಒದಗಿಸಲು ಸಮಗ್ರ ನ್ಯಾಯಾಂಗ ಸುಧಾರಣೆಗೆ ಒತ್ತು ನೀಡುವುದಾಗಿ ಅವರು ತಿಳಿಸಿದ್ದಾರೆ.

ಆಡಳಿತರೂಢಾ ಪಾಕಿಸ್ತಾನ್‌ ಮುಸ್ಲಿಂ ಲೀಗ್‌, ಪಾಕಿಸ್ತಾನ್‌ ಪೀಪಲ್ಸ್‌ ಪಕ್ಷವು ಪ್ರಣಾಳಿಕೆಯನ್ನು ಈಗಾಗಲೇ ಬಿಡುಗಡೆಗೊಳಿಸಿದೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 1

    Frustrated
  • 0

    Angry

Comments:

0 comments

Write the first review for this !