ಭಾನುವಾರ, ಸೆಪ್ಟೆಂಬರ್ 15, 2019
27 °C

‘ಭಾರತೀಯ ಐಟಿ ಕಂಪನಿಯಿಂದ ಉದ್ಯೋಗಿಗಳ ತಾರತಮ್ಯ’

Published:
Updated:

‌ವಾಷಿಂಗ್ಟನ್ : ‘ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಭಾರತದ ಡಿಜಿಟಲ್ ಸೇವಾ ಕಂಪನಿ ‘ಹ್ಯಾಪಿಯೆಸ್ಟ್ ಮೈಂಡ್ಸ್’ ಭಾರತೀಯರಲ್ಲದ ಉದ್ಯೋಗಿಗಳ ಕುರಿತು ತಾರತಮ್ಯ ಧೋರಣೆ ಅನುಸರಿಸುತ್ತಿದೆ’ ಎಂದು ಅಮೆರಿಕದ ಉದ್ಯೋಗಿಗಳ ಗುಂಪೊಂದು ಆರೋಪಿಸಿದೆ.

ಗುಂಪಿನ ಪರವಾಗಿ ಟಾಮಿ ಸಲ್ಸ್‌ಬರ್ಗ್‌ ಎನ್ನುವವರು ಸ್ಯಾನ್ ಜೋಸ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ.

‘ದಕ್ಷಿಣ ಏಷ್ಯಾದ, ನಿರ್ದಿಷ್ಟವಾಗಿ ಭಾರತದವರನ್ನೇ ಕಂಪನಿ ಆಯ್ಕೆ ಮಾಡಿಕೊಳ್ಳುತ್ತದೆ. ಇದಕ್ಕೂ ಮೊದಲು ಇವರಿಗಾಗಿ ಎಚ್‌–1 ಬಿ ಹಾಗೂ ಇತರೆ ವೀಸಾಗಳನ್ನು ಪಡೆದುಕೊಳ್ಳಲಾಗುತ್ತಿದೆ. ಇವರಿಗೆ ಹುದ್ದೆ ನೀಡುವ ಸಲುವಾಗಿ, ದಕ್ಷಿಣ ಏಷ್ಯಾ ಹಾಗೂ ಭಾರತದವರಲ್ಲದ ಉದ್ಯೋಗಿಗಳನ್ನು ಅವರ ಹುದ್ದೆಯಿಂದ ಬದಲಿಸಲಾಗುತ್ತದೆ’ ಎಂದು ದೂರಿನಲ್ಲಿ ಸಲ್ಸ್‌ಬರ್ಗ್ ಉಲ್ಲೇಖಿಸಿದ್ದಾರೆ.

ಉದ್ಯಮ ಅಭಿವೃದ್ಧಿ ನಿರ್ದೇಶಕಿ ಹುದ್ದೆಯಲ್ಲಿದ್ದ ನನ್ನನ್ನು ಬದಲಿಸಿ, ಚಂದನ್ ದಾಸ್ ಎನ್ನುವವರನ್ನು ನೇಮಿಸಲಾಗಿದೆ ಎಂದು ದೂರಿನಲ್ಲಿ ಸಲ್ಸ್‌ಬರ್ಗ್ ಹೇಳಿದ್ದಾರೆ.

‘ತಾರತಮ್ಯ ಧೋರಣೆಯಿಂದಾಗಿ, ಭಾರತೀಯರಿಗೆ ಹೋಲಿಸಿದರೆ ಭಾರತೀಯರಲ್ಲದ ಉದ್ಯೋಗಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇವೆಯಿಂದ ತೆಗೆದುಹಾಕಲಾಗುತ್ತಿದೆ. ಉದ್ಯೋಗಿಗಳ ಆಯ್ಕೆ, ಸೇವೆಯಿಂದ ತೆಗೆದುಹಾಕುವುದು ಸೇರಿದಂತೆ ಇತರೆ ಔದ್ಯೋಗಿಕ ನಿರ್ಣಯಗಳಲ್ಲಿ ತಾರತಮ್ಯ ಧೋರಣೆ ಅನುಸರಿಸಬಾರದು ಎಂದು ಕಂಪನಿಗೆ ನ್ಯಾಯಾಲಯ ಆದೇಶಿಸಬೇಕು’ ಎಂದು ದೂರಿನಲ್ಲಿ ತಿಳಿಸಲಾಗಿದೆ.

Post Comments (+)