ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಟಲಿ, ಇರಾನ್‌ನಲ್ಲಿದ್ದ ಭಾರತೀಯರು ತಾಯ್ನಾಡಿಗೆ

Last Updated 15 ಮಾರ್ಚ್ 2020, 19:45 IST
ಅಕ್ಷರ ಗಾತ್ರ
ADVERTISEMENT
""

ನವದೆಹಲಿ: ಇಟಲಿ ಹಾಗೂ ಇರಾನ್‌ನಲ್ಲಿ ಸಂಕಷ್ಟದಲ್ಲಿದ್ದ 450ಕ್ಕೂ ಅಧಿಕ ಸಂಖ್ಯೆಯ ಭಾರತೀಯರನ್ನು ಭಾನುವಾರ ಇಲ್ಲಿಗೆ ಏರ್‌ಇಂಡಿಯಾದ ಎರಡು ಪ್ರತ್ಯೇಕ ವಿಮಾನಗಳಲ್ಲಿ ಭಾನುವಾರ ಕರೆದುಕೊಂಡು ಬರಲಾಯಿತು.

ಈ ಪೈಕಿ 211 ಜನ ವಿದ್ಯಾರ್ಥಿಗಳು ಸೇರಿದಂತೆ 218 ಜನರು ಇಟಲಿಯ ಮಿಲಾನ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದರು. ಇವರನ್ನು ಹೊತ್ತ ವಿಮಾನ ಇಂದು ಬೆಳಿಗ್ಗೆ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು.

ನೈರುತ್ಯ ದೆಹಲಿಯಲ್ಲಿರುವ ಇಂಡೊ ಟಿಬೆಟನ್‌ ಬಾರ್ಡರ್‌ ಪೊಲೀಸ್‌ (ಐಟಿಬಿಪಿ) ವತಿಯಿಂದ ಸ್ಥಾಪಿಸಲಾಗಿರುವ ಪ್ರತ್ಯೇಕಿಸಿದ ನಿಗಾ ಕೇಂದ್ರದಲ್ಲಿ ಇವರನ್ನು ದಾಖಲಿಸಿ, ಕಣ್ಗಾವಲಿನಲ್ಲಿಡಲಾಗಿದೆ.

ಇರಾನ್‌ನಲ್ಲಿದ್ದ 230ಕ್ಕೂ ಅಧಿಕ ಭಾರತೀಯರು ಭಾನುವಾರ ನಸುಕಿನಲ್ಲಿ ತಾಯ್ನಾಡಿಗೆ ಕರೆತರಲಾಗಿದ್ದು,
ಜೈಸಲ್ಮೇರ್‌ನಲ್ಲಿರುವ ಇಂಡಿಯನ್‌ ಆರ್ಮಿ ವೆಲ್‌ನೆಸ್‌ ಸೆಂಟರ್‌ನಲ್ಲಿ ಸ್ಥಾಪಿಸಿರುವ ಪ್ರತ್ಯೇಕ ನಿಗಾ ಘಟಕದಲ್ಲಿ ದಾಖಲು ಮಾಡಲಾಗಿದೆ.

ಸುರಕ್ಷತೆಗೆ ಆದ್ಯತೆ: ಕೊರೊನಾ ಸೋಂಕು ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ವಿದೇಶದಲ್ಲಿಸಿಲುಕಿರುವ ಭಾರತೀಯರ ಸುರಕ್ಷತೆಗೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲು ವಿದೇ ಶಾಂಗ ಸಚಿವಾಲಯ ಮುಂದಾಗಿದೆ.

ಸಂಕಷ್ಟದಲ್ಲಿರುವ ಭಾರತೀಯರಿಗೆ ನೆರವಿನ ಹಸ್ತ ಚಾಚುವ ಸಂಬಂಧ ವಿಶೇಷ ಘಟಕಗಳನ್ನು ಸ್ಥಾಪಿಸಲಾಗಿದೆ. ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ದಮ್ಮು ರವಿ ಅವರನ್ನು ಸಮನ್ವಯಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದ್ದು, ಅವರ ಸಹಾಯಕ್ಕಾಗಿ ನಾಲ್ವರು ಅಧಿಕಾರಿಗಳನ್ನು ಸಹ ನಿಯೋಜನೆ ಮಾಡಲಾ ಗಿದೆ. ವಿದೇಶಾಂಗ ಸಚಿವ ಎಸ್‌.ಜೈಶಂಕರ್‌, ವಿದೇಶಾಂಗ ಕಾರ್ಯದರ್ಶಿ ಹರ್ಷ ವರ್ಧನ್‌ ಶ್ರಿಂಗ್ಲಾ ಅವರು ಈ ಕಾರ್ಯಾಚರಣೆ ಮೇಲೆ ನಿಗಾ ವಹಿಸಿದ್ದಾರೆ.

ಹಡಗಿನಲ್ಲೇ ದಿಗ್ಬಂಧನ: ಮುಂಜಾಗ್ರತಾ ಕ್ರಮವಾಗಿ, 700ಕ್ಕೂ ಅಧಿಕ ಹಡಗುಗಳ ಮೂಲಕ ದೇಶಕ್ಕೆ ಬಂದಿರುವ ಜನರನ್ನು ಹಡಗಿನಿಂದ ಇಳಿಯದಂತೆ ನಿರ್ಬಂಧ ವಿಧಿಸಲಾಗಿದೆ.

* ಭಾರತ–ಬಾಂಗ್ಲಾದೇಶ ನಡುವೆ ಸಂಚರಿಸುವ ಮೈತ್ರಿ ಹಾಗೂ ಬಂಧನ್‌ ಎಕ್ಸ್‌ಪ್ರೆಸ್‌ ರೈಲುಗಳ ಸಂಚಾರವನ್ನು ಏಪ್ರಿಲ್‌ 15ರವೆಗೆ ರದ್ದು ಮಾಡಲಾಗಿದೆ

* ಕೋವಿಡ್‌ನಿಂದಾಗಿ ದೆಹಲಿಯಲ್ಲಿ ಮೃತಪಟ್ಟ ಮಹಿಳೆಯ ಪುತ್ರನ ಆರೋಗ್ಯ ಸ್ಥಿರವಾಗಿದೆ. ಅವರಿಗೆ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

*ಪಾಕಿಸ್ತಾನ ಕರ್ತಾರ್‌ಪುರ ಸಾಹಿಬ್ ಗುರುದ್ವಾರಕ್ಕೆ ತೀರ್ಥಯಾತ್ರೆ ಕೈಗೊಳ್ಳುವವರ ನೋಂದಣಿಯನ್ನು ಭಾನುವಾರ ಮಧ್ಯರಾತ್ರಿಯಿಂದ ರದ್ದುಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT