ಮಂಗಳವಾರ, ನವೆಂಬರ್ 19, 2019
25 °C
ಇರಾನ್‌ ಅಧ್ಯಕ್ಷ ಹಸನ್‌ ರೌಹಾನಿ ಘೋಷಣೆ

ಭಾರಿ ಪ್ರಮಾಣದ ಕಚ್ಚಾತೈಲ ನಿಕ್ಷೇಪ ಪತ್ತೆ

Published:
Updated:
Prajavani

ಟೆಹರಾನ್‌: ‘ಭಾರಿ ಪ್ರಮಾಣದಲ್ಲಿ ಕಚ್ಚಾ ತೈಲ ಇರುವ ನಿಕ್ಷೇಪವನ್ನು ಪತ್ತೆ ಮಾಡಲಾಗಿದೆ’ ಎಂದು ಇರಾನ್‌ ಅಧ್ಯಕ್ಷ ಹಸನ್‌ ರೌಹಾನಿ ಭಾನುವಾರ ಘೋಷಿಸಿದ್ದಾರೆ.

ತೈಲ ನಿಕ್ಷೇಪಗಳನ್ನು ಹೊಂದಿರುವ ರಾಷ್ಟ್ರಗಳ ಪೈಕಿ ಇರಾನ್‌ ನಾಲ್ಕನೇ ಸ್ಥಾನದಲ್ಲಿದ್ದರೆ, ನೈಸರ್ಗಿಕ ಅನಿಲ ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಅಮೆರಿಕ ವಿಧಿಸಿರುವ ನಿರ್ಬಂಧದ ಪರಿಣಾಮ ಸಂಕಷ್ಟ ಎದುರಿಸುತ್ತಿರುವ ಇರಾನ್‌ನ ಆರ್ಥಿಕತೆಗೆ, ಈಗ ಪತ್ತೆಯಾಗಿರುವ ಕಚ್ಚಾತೈಲ ಮತ್ತಷ್ಟೂ ಬಲ ತುಂಬಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಸರ್ಕಾರಿ ಒಡೆತನದ ಟಿ.ವಿ ಮೂಲಕ ದೇಶವನ್ನು ಉದ್ದೇಶಿಸಿ ಮಾತನಾಡಿದ ರೌಹಾನಿ, ‘ದೇಶದ ಮೇಲೆ ಅಮೆರಿಕ ನಿರ್ಬಂಧ ಹೇರಿದ್ದರೂ, ನಮ್ಮ ಆರ್ಥಿಕ ಸ್ಥಿತಿಯಲ್ಲಿ ಸ್ಥಿರತೆಯನ್ನು ಸಾಧಿಸಿದ್ದೇವೆ’ ಎಂದು ಹೇಳಿದ್ದಾರೆ.

ಒಟ್ಟು 2.400 ಚದರ ಕಿ.ಮಿ. ವಿಸ್ತೀರ್ಣದ ಈ ನಿಕ್ಷೇಪ, ದೇಶದ ನೈರುತ್ಯ ಭಾಗದ ಖುಜೆಸ್ತಾನ್ ಪ್ರಾಂತ್ಯದಲ್ಲಿ ಪತ್ತೆಯಾಗಿದೆ. 53 ಶತಕೋಟಿ ಬ್ಯಾರೆಲ್‌ಗಳಷ್ಟು ಕಚ್ಚಾ ತೈಲ ಲಭ್ಯವಾಗಲಿದೆ ಎಂದು ಅಂದಾಜಿಸಲಾಗಿದೆ. 

ಅಣ್ವಸ್ತ್ರ ಒಪ್ಪಂದದಿಂದ ಇರಾನ್‌ 2015ರಲ್ಲಿ ಹೊರಗೆ ಬಂದ ಕಾರಣ, ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇರಾನ್‌ ಮೇಲೆ ನಿರ್ಬಂಧ ಹೇರಿದರು. ಇದರಿಂದಾಗಿ ಇರಾನ್‌ ತಾನು ಉತ್ಪಾದಿಸುವ ತೈಲವನ್ನು ಮಾರಾಟ ಮಾಡಲು ಹೆಣಗಾಡುತ್ತಿದೆ. 

ಪ್ರತಿಕ್ರಿಯಿಸಿ (+)