ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೋಹಾದಲ್ಲಿ ಜೈಪುರ ಸಾಹಿತ್ಯ ಉತ್ಸವ

Last Updated 24 ನವೆಂಬರ್ 2019, 19:56 IST
ಅಕ್ಷರ ಗಾತ್ರ

ನವದೆಹಲಿ: ಜೈಪುರ ಸಾಹಿತ್ಯ ಉತ್ಸವ ಇದೇ ಮೊದಲ ಬಾರಿಗೆ ದೋಹಾದಲ್ಲಿ ಡಿಸೆಂಬರ್‌ 12ರಿಂದ 14ವರೆಗೆ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಕತಾರ್ ರಾಷ್ಟ್ರೀಯ ಗ್ರಂಥಾಲಯವು ಟೀಂವರ್ಕ್‌ ಆರ್ಟ್ಸ್‌ನ ಸಹಭಾಗಿತ್ವದಲ್ಲಿಮೂರು ದಿನದ ಈ ಉತ್ಸವವನ್ನು ಆಯೋಜಿಸಿದೆ. ಉತ್ಸವದಲ್ಲಿ ಜಗತ್ತಿನ ಪ್ರಸಿದ್ಧ ಲೇಖಕರು ಹಾಗೂ ಚಿಂತಕರು ಭಾಗವಹಿಸಲಿದ್ದಾರೆ.

ಪ್ರಸಿದ್ಧ ಗೀತರಚನೆಕಾರ ಜಾವೆದ್‌ ಅಖ್ತರ್‌, ನಟಿ ಶರ್ಮಿಳಾ ಟಾಗೋರ್‌, ಲೇಖಕಿ ಅನಿತಾ ನಾಯರ್‌ ಹಾಗೂ ನಟಿ, ಲೇಖಕಿ ಕಿಮ್‌ ಪಿರೆರಾ ಉತ್ಸವದಲ್ಲಿ ಭಾಗಿಯಾಗಲಿದ್ದಾರೆ ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT