ನಾಗಸಾಕಿ ಮೇಲಿನ ಅಣುಬಾಂಬ್‌ ದಾಳಿಗೆ 73 ವರ್ಷ

7

ನಾಗಸಾಕಿ ಮೇಲಿನ ಅಣುಬಾಂಬ್‌ ದಾಳಿಗೆ 73 ವರ್ಷ

Published:
Updated:
Deccan Herald

ಟೋಕಿಯೊ: ಜಪಾನ್‌ನ ನಗರ ನಾಗಸಾಕಿ ಮೇಲೆ ನಡೆದ ಅಣುಬಾಂಬ್‌ ದಾಳಿಗೆ ಗುರುವಾರ 73 ವರ್ಷ ತುಂಬಿತು. ಇದರ ಅಂಗವಾಗಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಅಂಟೊನಿಯೊ ಗುಟೆರಸ್‌ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾತಾಡಿದ ಗುಟೆರಸ್, ‘ಪರಮಾಣು ನಿಶಸ್ತ್ರೀಕರಣಕ್ಕೆ ಎಲ್ಲಾ ದೇಶಗಳು ಬದ್ಧತೆ ತೋರಬೇಕು. ಈ ನಿಟ್ಟಿನಲ್ಲಿ ದೃಢವಾದ ಹೆಜ್ಜೆ ಇಡಬೇಕಿದೆ’ ಎಂದರು.

‘73 ವರ್ಷಗಳ ನಂತರವೂ ಪರಮಾಣು ಯುದ್ಧದ ಭೀತಿ ಇನ್ನೂ ನೆಲೆಸಿದೆ. ಹಿರೋಶಿಮಾ ಮತ್ತು ನಾಗಸಾಕಿ  ಮೇಲಿನ ರೀತಿಯ ದಾಳಿ ಮರುಕಳಿಸಬಾರದು’ ಎಂದರು.

ನಾಗಸಾಕಿ ಮೇಲೆ 1945 ರ ಆಗಸ್ಟ್‌ 9 ರಂದು ಅಮೆರಿಕ ನಡೆಸಿದ ಎರಡನೇ ಅಣುಬಾಂಬ್‌ ದಾಳಿಯಲ್ಲಿ 70 ಸಾವಿರ ಜನರು ಮೃತಪಟ್ಟಿದ್ದರು. ಹಿರೋಶಿಮಾ ಮೇಲೆ ದಾಳಿ ನಡೆದ ಮೂರು ದಿನದ ನಂತರ ನಾಗಸಾಕಿ ಮೇಲೆ ಬಾಂಬ್‌ ಹಾಕಲಾಗಿತ್ತು. ಹಿರೋಶಿಮಾ ದಾಳಿಯಲ್ಲಿ 14 ಸಾವಿರ ಜನರು ಮೃತಪಟ್ಟಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !