ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ಯಾಲಕ್ಸಿ ಜೊತೆ ಸೆಲ್ಫಿ: ನಾಸಾ ಹೊಸ ಆ್ಯಪ್

Last Updated 23 ಆಗಸ್ಟ್ 2018, 16:58 IST
ಅಕ್ಷರ ಗಾತ್ರ

ವಾಷಿಂಗ್ಟನ್: ಸ್ಪಿಟ್ಜರ್ ಬಾಹ್ಯಾಕಾಶ ದೂರದರ್ಶಕ ಕಾರ್ಯಾರಂಭ ಮಾಡಿದ 15ನೇ ವರ್ಷದ ನೆನಪಿಗಾಗಿ ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ, ಮಿಥ್ಯಾವಾಸ್ತವದ (ವರ್ಚುವಲ್ ರಿಯಾಲಿಟಿ) ಎರಡು ಆ್ಯಪ್‌ಗಳನ್ನು ಪರಿಚಯಿಸಿದೆ. ಗ್ಯಾಲಕ್ಸಿಗಳ ಜೊತೆ ಸೆಲ್ಫಿ ಕ್ಲಿಕ್ಕಿಸಿದ ಅನುಭವ ಈ ಆ್ಯಪ್‌ಗಳ ಮೂಲಕ ದೊರಕಲಿದೆ ಎಂದು ಅದು ತಿಳಿಸಿದೆ.

ಈ ಕಿರು ತಂತ್ರಾಂಶಗಳಲ್ಲಿ ಸ್ಪಿಟ್ಜರ್ ದೂರದರ್ಶಕದ ಸಂಶೋಧನಾ ಮಾಹಿತಿಗಳು ಹಾಗೂ ಅದು ಸೆರೆಹಿಡಿದ 30ಕ್ಕೂ ಹೆಚ್ಚು ಅಭೂತಪೂರ್ವ ಚಿತ್ರಗಳು ಲಭ್ಯ. ಇತರ ಬಾಹ್ಯಾಕಾಶ ನೌಕೆಗಳು ಸೆರೆಹಿಡಿದ ಚಿತ್ರಗಳನ್ನೂ ಮುಂದಿನ ದಿನಗಳಲ್ಲಿ ಇದಕ್ಕೆ ಸೇರಿಸಲಾಗುತ್ತದೆ.

ಗಗನಯಾತ್ರಿಯ ಪೋಷಾಕಿನಲ್ಲಿ ಕಾಣಿಸಿಕೊಳ್ಳಬೇಕೆಂದರೆ ಈ ಆಪ್ಯ್‌ಗಳನ್ನು ಬಳಸಿದರೆ ಸಾಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT