ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛ ಭಾರತ ಅಭಿಯಾನ: ಪ್ರಧಾನಿ ಮೋದಿಗೆ ‘ಜಾಗತಿಕ ಗೋಲ್‌ಕೀಪರ್‌’ಪ್ರಶಸ್ತಿ ಪ್ರದಾನ

ಪ್ರಶಸ್ತಿಯನ್ನು ಭಾರತೀಯರಿಗೆ ಸಮರ್ಪಿಸಿದ ಪ್ರಧಾನಿ
Last Updated 25 ಸೆಪ್ಟೆಂಬರ್ 2019, 3:32 IST
ಅಕ್ಷರ ಗಾತ್ರ

ನ್ಯೂಯಾರ್ಕ್:ಸ್ವಚ್ಛ ಭಾರತ ಅಭಿಯಾನಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಿಲ್‌ ಮತ್ತು ಮೆಲಿಂಡಾ ಗೇಟ್ಸ್‌ ಪ್ರತಿಷ್ಠಾನದಿಂದ ’ಜಾಗತಿಕ ಗೋಲ್‌ಕೀಪರ್‌ ಪ್ರಶಸ್ತಿ‘ ನೀಡಿ ಗೌರವಿಸಲಾಯಿತು.

ಪ್ರಶಸ್ತಿ ದೇಶಕ್ಕೆ ಸಮರ್ಪಣೆ

‘ನಾನು, ಗೇಟ್ಸ್‌ ಪ್ರತಿಷ್ಠಾನ ನೀಡಿರುವ ‘ಜಾಗತಿಕ ಗೋಲ್‌ಕೀಪರ್‌‘ ಪ್ರಶಸ್ತಿಯನ್ನು ಭಾರತದ 130 ಕೋಟಿ ಜನರಿಗೆ ಮತ್ತು ಸ್ಚಚ್ಛತೆಗಾಗಿ ನಡೆದ ರಾಷ್ಟ್ರದ ಸಾಮೂಹಿಕ ಕಾರ್ಯಗಳಿಗೆ ಸಮರ್ಪಿಸುತ್ತೇನೆ‘ ಎಂದು ಪ್ರಶಸ್ತಿ ಸ್ವೀಕರಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

‘ಸ್ವಚ್ಛ ಭಾರತದ ಯಶಸ್ಸಿಗೆ ಮಹಿಳೆಯರು ಮತ್ತು ಮಕ್ಕಳು ಹೆಚ್ಚು ಹೆಚ್ಚು ಕೈ ಜೋಡಿಸಿದ್ದಾರೆ. ಇದು ಅವರ ಕೊಡುಗೆ, ಆದ್ದರಿಂದ ಹೆಚ್ಚು ಸಂತೋಷವಾಗಿದೆ‘ ಎಂದು ಮೋದಿ ಪ್ರಶಸಂಸೆ ವ್ಯಕ್ತಪಡಿಸಿದ್ದಾರೆ.

ಅಷ್ಟೇ ಅಲ್ಲ, ಸ್ವಚ್ಛ ಭಾರತ ಅಭಿಯಾನವನ್ನು ‘ಜನರ ಚಳವಳಿ‘ಯಾಗಿ ಪರಿವರ್ತಿಸಿದ ಭಾರತೀಯರು, ನಿತ್ಯದ ಜೀವನದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿದರು. ಆದ್ದರಿಂದ, ಈ ಪ್ರಶಸ್ತಿಯನ್ನು ದೇಶದ ಜರಿಗೆ ಸಮರ್ಪಿಸುತ್ತಿದ್ದೇನೆ ಎಂದರು.

ಮಹಾತ್ಮ ಗಾಂಧಿ ಅವರ 150ನೇ ಜನ್ಮದಿನಾಚರಣೆ ವರ್ಷದಲ್ಲಿ ಪ್ರಶಸ್ತಿ ಪಡೆಯುತ್ತಿರುವುದು ನನಗೆ ವೈಯಕ್ತಿಕವಾಗಿ ಮಹತ್ವದ್ದಾಗಿದೆ. 130 ಕೋಟಿ ಭಾರತೀಯರು ಪ್ರತಿಜ್ಞೆ ಮಾಡಿದರೆ ಯಾವುದೇ ಸವಾಲನ್ನು ಜಯಿಸಬಹುದು ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT