ಸಮುದ್ರಮಟ್ಟ ಏರಿಕೆಯಿಂದ ಅಪಾರ ಪ್ರಮಾಣದ ಹಾನಿ

7
ಜಾಗತಿಕ ತಾಪಮಾನ ನಿಯಂತ್ರಿಸಲು ವಿಜ್ಞಾನಿಗಳ ಸಲಹೆ

ಸಮುದ್ರಮಟ್ಟ ಏರಿಕೆಯಿಂದ ಅಪಾರ ಪ್ರಮಾಣದ ಹಾನಿ

Published:
Updated:
ಸ

ಲಂಡನ್‌: ಸಮುದ್ರ ಮಟ್ಟ ಏರಿಕೆಯಿಂದ 2100ರ ವೇಳೆಗೆ ಪ್ರತಿ ವರ್ಷ ಜಾಗತಿಕವಾಗಿ ₹962.33 ಲಕ್ಷ ಕೋಟಿ ಮೊತ್ತದಷ್ಟು ಹಾನಿಯಾಗಲಿದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.

ಹೆಚ್ಚುತ್ತಿರುವ ಜಾಗತಿಕ ತಾಪಮಾನವನ್ನು ನಿಯಂತ್ರಿಸದಿದ್ದರೆ ಜಾಗತಿಕ ಆರ್ಥಿಕತೆ ಮೇಲೆಯೂ ಪರಿಣಾಮ ಬೀರಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಸಮುದ್ರಮಟ್ಟ ಏರಿಕೆಯಿಂದ ಚೀನಾದಂತಹ ದೇಶಗಳಿಗೆ ಹೆಚ್ಚು ಹಾನಿಯಾಗಲಿದೆ. ಆದರೆ, ಅತ್ಯುತ್ತಮ ಮೂಲಸೌಕರ್ಯಗಳು ಮತ್ತು ಅತಿ ಹೆಚ್ಚು ಆದಾಯ ಹೊಂದಿರುವ ದೇಶಗಳಿಗೆ ಕಡಿಮೆ ನಷ್ಟವಾಗಲಿದೆ ಎಂದು ವಿಶ್ಲೇಷಿಸಲಾಗಿದೆ.

ಬ್ರಿಟನ್‌ನ ರಾಷ್ಟ್ರೀಯ ಸಾಗರ ಅಧ್ಯಯನ ಕೇಂದ್ರದ ಸಂಶೋಧಕರು ಈ ಬಗ್ಗೆ ಅಧ್ಯಯನ ನಡೆಸಿದ್ದಾರೆ.

’ಕರಾವಳಿಯ ತಗ್ಗು ಪ್ರದೇಶದಲ್ಲೇ 60 ಕೋಟಿಗೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಇವರೆಲ್ಲರೂ ಸಮುದ್ರಮಟ್ಟಕ್ಕಿಂತ 10 ಮೀಟರ್‌ ಕೆಳಗಿದ್ದಾರೆ ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಸಮುದ್ರ ಮಟ್ಟ ಹೆಚ್ಚಳ ಈ ಜನರ ಮೇಲೆ ಅಪಾರ ಪರಿಣಾಮ ಬೀರಲಿದೆ’ ಎಂದು ವಿಜ್ಞಾನಿ ಸ್ವೆತ್ಲಾನಾ ಜೆವ್ರೆಜೀವಾ ಅಭಿಪ್ರಾಯಪಟ್ಟಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !