ಮಂಗಳವಾರ, ಫೆಬ್ರವರಿ 18, 2020
23 °C

ಇರಾಕ್‌: ಅಮೆರಿಕ ರಾಯಭಾರ ಕಚೇರಿ ಬಳಿ ರಾಕೆಟ್‌ ದಾಳಿ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಬಾಗ್ದಾದ್‌: ಇರಾಕ್‌ ರಾಜಧಾನಿ ಬಾಗ್ದಾದ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿ ಬಳಿ ಭಾನುವಾರ ರಾತ್ರಿ ಸರಣಿ ರಾಕೆಟ್‌ ದಾಳಿಗಳು ನಡೆದಿವೆ ಎಂದು ಭದ್ರತಾ ಮೂಲಗಳು ತಿಳಿಸಿವೆ.

ಹೆಚ್ಚು ಭದ್ರತೆ ಇರುವ ಹಸಿರು ವಲಯದ ಮೇಲೆ ಐದು ರಾಕೆಟ್‌ಗಳು ಅಪ್ಪಳಿಸಿವೆ. ಈ ದಾಳಿಯಲ್ಲಿ ಪ್ರಾಣ ಹಾನಿ ಸಂಭವಿಸಿದ ವರದಿಯಾಗಿಲ್ಲ ಎಂದು ಇರಾಕ್‌ ಭದ್ರತಾ ಪಡೆಯ ಪ್ರಕಟಣೆ ತಿಳಿಸಿದೆ. ಆದರೆ ಪ್ರಕಟಣೆಯಲ್ಲಿ ಅಮೆರಿಕ ರಾಯಭಾರ ಕಚೇರಿಯ ಬಗ್ಗೆ ಅದು ಪ್ರಸ್ತಾಪಿಸಿಲ್ಲ.

ಇದೇ ವಲಯದ ವ್ಯಾಪ್ತಿಯಲ್ಲಿ ಅಮೆರಿಕ ರಾಯಭಾರ ಕಚೇರಿ ಸೇರಿದಂತೆ ಹಲವು ವಿದೇಶಿ ರಾಯಭಾರ ಕಚೇರಿಗಳಿವೆ. ಇರಾಕ್‌ ಸಂಸತ್ತು ಕೂಡ ಇದೇ ವಲಯದಲ್ಲಿದೆ.

ಜನವರಿ 3ರಂದು ಇರಾನಿನ ಜನರಲ್‌ ಖಾಸಿಂ ಸುಲೇಮಾನಿ ಅವರನ್ನು ಅಮೆರಿಕ ಪಡೆ ಕೊಂದ ಬಳಿಕ, ಅಮೆರಿಕ ಸೇನೆಯ ವಿರುದ್ಧ ಇರಾನ್‌ನ ಆಕ್ರೋಶ ಹೆಚ್ಚಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)