ಸೋಮವಾರ, ಸೆಪ್ಟೆಂಬರ್ 20, 2021
21 °C

ಜಾಮೀನು ನಿಬಂಧನೆ ಉಲ್ಲಂಘನೆ: ಜೂಲಿಯನ್‌ ಅಸಾಂಜ್‌‌ಗೆ 50 ವಾರಗಳ ಜೈಲು ಶಿಕ್ಷೆ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್‌/ಕ್ವಿಟೊ: ಜಾಮೀನು ನಿಬಂಧನೆಗಳನ್ನು ಉಲ್ಲಂಘಿಸಿ ತಪ್ಪೆಸಗಿರುವ ವಿಕಿಲೀಕ್ಸ್‌ ಸಹ ಸಂಸ್ಥಾಪಕ ಜೂಲಿಯನ್‌ ಅಸಾಂಜ್‌‌ಗೆ ಲಂಡನ್‌ ನ್ಯಾಯಾಲಯ 50 ವಾರಗಳ ಜೈಲು ಶಿಕ್ಷೆ ವಿಧಿಸಿದೆ.

ಲಂಡನ್‌ನ ಸೌತ್‌ವಾರ್ಕ್ ಕ್ರೌನ್ ಕೋರ್ಟ್‌ನಲ್ಲಿ ಅಸಾಂಜ್ ವಿಚಾರಣೆ ನಡೆದಿದೆ.

ಏಪ್ರಿಲ್ 11ರಂದು  ಈಕ್ವೆಡಾರ್ ರಾಜತಾಂತ್ರಿಕ ಕಚೇರಿಯಲ್ಲಿ ಬಂಧನಕ್ಕೊಳಗಾದ ನಂತರ ಅಸಾಂಜ್ ಜಾಮೀನು ನಿಬಂಧನೆಗಳನ್ನು ಉಲ್ಲಂಘಿಸಿದ್ದರು.

ಸ್ವೀಡನ್‌ನ ಇಬ್ಬರು ಮಹಿಳೆಯರು ಅಸಾಂಜ್‌ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದರು, ಈ ಪ್ರಕರಣದ ವಿಚಾರಣೆ ಹಿನ್ನೆಲೆಯಲ್ಲಿ ಸ್ವೀಡನ್‍ಗೆ  ಗಡಿಪಾರು ಭೀತಿ ಎದುರಿಸುತ್ತಿದ್ದ ಅಸಾಂಜ್ ಅವರು 2012ರಲ್ಲಿ ಈಕ್ವೆಡಾರ್‌ ರಾಯಭಾರಿ ಕಚೇರಿಯ ಆಶ್ರಯ ಪಡೆದು,ರಾಯಭಾರಿ ಕಚೇರಿಗೆ ಸಂಬಂಧಿಸಿದ ಕಟ್ಟಡದಲ್ಲೇ ನೆಲೆಸಿದ್ದರು. 

 2017ರಲ್ಲಿ ಅತ್ಯಾಚಾರ ಪ್ರಕರಣದ ತನಿಖೆಯನ್ನು ಸ್ವೀಡನ್‌ ಕೈಬಿಟ್ಟಿತು. ಆದರೆ ಜಾಮೀನು ವೇಳೆ ವಿಧಿಸಿದ್ದ ಷರತ್ತುಗಳನ್ನು ಉಲ್ಲಂಘಿಸಿರುವುದರಿಂದ ಏಪ್ರಿಲ್‌ 11ರಂದು ಈಕ್ವೆಡಾರ್‌ ರಾಜತಾಂತ್ರಿಕ ಕಚೇರಿಯಲ್ಲಿ ಜೂಲಿಯನ್‌ ಅಸಾಂಜ್  ಅವರನ್ನು ಮೆಟ್ರೊಪಾಲಿಟನ್‌ ಪೊಲೀಸ್‌ ಸರ್ವಿಸ್‌(ಎಂಪಿಎಸ್‌) ಅಧಿಕಾರಿಗಳು ಬಂಧಿಸಿದ್ದರು.

ಇದನ್ನೂ ಓದಿ: 

ಏಳು ವರ್ಷಗಳ ಬಳಿಕ ’ವಿಕಿಲೀಕ್ಸ್‌’ ಸಂಸ್ಥಾಪಕ ಜೂಲಿಯನ್‌ ಅಸಾಂಜ್ ಬಂಧನ

ಜಾಮೀನು ನಿಬಂಧನೆ ಉಲ್ಲಂಘನೆ ಅಸಾಂಜ್‌ ದೋಷಿ: ಕೋರ್ಟ್

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು