ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಯಾಲೆಸ್ಟೀನ್‌: ಅಮೆರಿಕದ ನಿಲುವಿಗೆ ವಿಶ್ವಸಂಸ್ಥೆ ವಿಷಾದ

ಇಸ್ರೇಲ್‌ ವಸತಿಪ್ರದೇಶ ಕಾನೂನುಬಾಹಿರವಲ್ಲ ಎನ್ನುವ ಧೋರಣೆಗೆ ಅಸಮಾಧಾನ
Last Updated 20 ನವೆಂಬರ್ 2019, 15:49 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: ಪ್ಯಾಲೆಸ್ಟೀನ್‌ನಲ್ಲಿನ ಇಸ್ರೇಲ್‌ ನಿರ್ಮಿಸಿರುವ ವಸತಿ ಪ್ರದೇಶ ಕಾನೂನು ಬಾಹಿರವಲ್ಲ ಎಂದು ಅಮೆರಿಕ ನೀಡಿರುವ ಹೇಳಿಕೆಗೆ ವಿಶ್ವಸಂಸ್ಥೆ ಮಹಾ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್‌ ವಿಷಾದ ವ್ಯಕ್ತಪಡಿಸಿದ್ದಾರೆ.

‘ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ’ ಎಂದಿರುವವಿಶ್ವಸಂಸ್ಥೆಯ ಮುಖ್ಯ ವಕ್ತಾರ ಸ್ಟೀಫನ್‌ ಡುಜಾರಿಕ್‌, ಅಮೆರಿಕದ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಭದ್ರತಾ ಮಂಡಳಿಯ ನಿರ್ಣಯಕ್ಕೆ ಬದ್ಧರಾಗಿದ್ದೇವೆ. ಶಾಶ್ವತ ಶಾಂತಿ ಸ್ಥಾಪನೆಯ ಉದ್ದೇಶಕ್ಕೆ ನಮ್ಮ ಬೆಂಬಲವಿರುತ್ತದೆ’ ಎಂದಿದ್ದಾರೆ.

‘ಪ್ಯಾಲಿಸ್ಟೇನ್‌ನಲ್ಲಿ ಇಸ್ರೇಲ್‌ ನಿರ್ಮಿಸಿರುವ ವಸತಿ ಪ್ರದೇಶ ಅಂತರರಾಷ್ಟ್ರೀಯ ಕಾನೂನಿನಡಿಯಲ್ಲಿ ಉಲ್ಲಂಘನೆಯಾಗುತ್ತದೆ.ಇದು ಎರಡು ದೇಶಗಳ ನಡುವಣ ಸಮಗ್ರ ಶಾಂತಿ ಪ್ರಕ್ರಿಯೆ ಅಡಚಣೆ ಉಂಟುಮಾಡಿದೆ. ವಿಶ್ವಸಂಸ್ಥೆಯ 2334 ನಿರ್ಣಯ ಇದನ್ನೇ ಪ್ರತಿಪಾದಿಸುತ್ತದೆ’ ಎಂದಿದ್ದಾರೆ.

ಇದೇ ಪ್ರಥಮ ಬಾರಿ ತನ್ನ ಧೋರಣೆಯನ್ನು ಬದಲಾಯಿಸಿದ್ದ ಅಮೆರಿಕ, ಪ್ಯಾಲೆಸ್ಟೀನ್‌ನ ವೆಸ್ಟ್‌ಬ್ಯಾಂಕ್‌ ಪ್ರದೇಶದಲ್ಲಿನ ಇಸ್ರೇಲ್‌ ಇರುವಿಕೆ ಅಕ್ರಮವಲ್ಲ. ಇದರಿಂದ, ಶಾಂತಿ ಪ್ರಕ್ರಿಯೆಗೂ ಯಾವುದೇ ರೀತಿ ನೆರವಾಗಿಲ್ಲ ಎಂದು ಸೋಮವಾರ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT