ಬುಧವಾರ, ಜನವರಿ 22, 2020
28 °C

ಉತ್ತರ ಕೊರಿಯಾ ಬೇಡಿಕೆಗಳು ಅನಗತ್ಯ: ಅಮೆರಿಕ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಸೋಲ್‌: ‘ಉತ್ತರ ಕೊರಿಯಾದ ಬೇಡಿಕೆಗಳು ಅನಗತ್ಯವಾದವುಗಳು’ ಎಂದು ಅಮೆರಿಕದ ವಿಶೇಷ ಪ್ರತಿನಿಧಿ ಸ್ಟೀಫನ್‌ ಬೀಗನ್‌ ಸೋಮವಾರ ಹೇಳಿದ್ದಾರೆ.

ಉತ್ತರ ಕೊರಿಯಾದ ಜೊತೆ ಮಾತುಕತೆ ನಡೆಸಿದ ಅವರು,‘ಉತ್ತರ ಕೊರಿಯಾ ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಚೋದನಾತ್ಮಕವಾಗಿ ವರ್ತಿಸಲಿದೆ ಎಂಬುದು ನಮಗೆ ತಿಳಿದಿದೆ’ ಎಂದಿದ್ದಾರೆ.

2019ರ ಅಂತ್ಯದ ವೇಳೆಗೆ ವಾಷಿಂಗ್ಟನ್‌ ಹೊಸ ರಿಯಾಯಿತಿಗಳನ್ನು ನೀಡಬೇಕೆಂದು ಉತ್ತರ ಕೊರಿಯಾ ಅಮೆರಿಕವನ್ನು ಆಗ್ರಹಿಸಿತ್ತು.

‘ಕೊರಿಯಾ ಪರ್ಯಾಯ ದ್ವೀಪದಲ್ಲಿ ಶಾಶ್ವತವಾಗಿ ಶಾಂತಿ ನೆಲೆಸಲು ಈ ನಡೆಯು ಸಹಾಯಕವಾಗದು’ ಎಂದೂ ಸ್ಟೀಫನ್‌ ಹೇಳಿದ್ದಾರೆ.

ಆದರೆ ಉತ್ತರ ಕೊರಿಯಾದ ಜೊತೆ ಹೊಸದಾಗಿ ಮಾತುಕತೆ ನಡೆಸುವ ಸಾಧ್ಯತೆಗಳನ್ನು ಅಮೆರಿಕ ತಳ್ಳಿಹಾಕಿಲ್ಲ.

‘ಅಮೆರಿಕವು ಸ್ವೀಕಾರಾರ್ಹ ಪ್ರಸ್ತಾಪವನ್ನು ಮುಂದಿಡದಿದ್ದರೆ ನಾವು ಹೊಸ ದಾರಿ ಕಂಡುಕೊಳ್ಳಲಿದ್ದೇವೆ’ ಎಂದು ಉತ್ತರ ಕೊರಿಯಾ ಹೇಳಿದೆ.

 

 

 

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು