ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರಂಪ್‌ ವಿರುದ್ಧದ ವಾಗ್ದಂಡನೆಗೆ ಸೋಲು

ಅಮೆರಿಕ: ಡೆಮಾಕ್ರಟಿಕ್‌ ಪಕ್ಷದ ಸದಸ್ಯರಿಂದಲೇ ದೊರೆಯದ ಬೆಂಬಲ
Last Updated 18 ಜುಲೈ 2019, 17:19 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿರುದ್ಧ ಮಂಡಿಸಿದ್ದ ವಾಗ್ದಂಡನೆ ಪ್ರಸ್ತಾವನೆಗೆ ಜನಪ್ರತಿನಿಧಿಗಳ ಸಭೆಯಲ್ಲಿ ಸೋಲಾಗಿದೆ.

ಜನಪ್ರತಿನಿಧಿಗಳ ಸಭೆಯಲ್ಲಿ ಡೆಮಾಕ್ರಟಿಕ್‌ ಪಕ್ಷಕ್ಕೆ ಬಹುಮತವಿದ್ದರೂ, ಹೆಚ್ಚಿನ ಸದಸ್ಯರು ಬೆಂಬಲಿಸಲಿಲ್ಲ.

ಸಂಸದ ಅಲ್‌ ಗ್ರೀನ್‌ ಮಂಡಿಸಿದ ಪ್ರಸ್ತಾವನೆ ವಿರುದ್ಧ 332 ಮತಗಳು ಮತ್ತು ಪರವಾಗಿ 95 ಮತಗಳು ಚಲಾವಣೆಯಾದವು. ರಾಜಕೀಯವಾಗಿ ಭಿನ್ನಾಭಿಪ್ರಾಯಗಳಿದ್ದರೂ ಡೆಮಾಕ್ರಟಿಕ್‌ ಪಕ್ಷದ ಬಹುತೇಕ ಸದಸ್ಯರು ವಾಗ್ದಂಡನೆ ಪ್ರಸ್ತಾವಕ್ಕೆ ಸಿದ್ಧರಿಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.

ಸ್ಪೀಕರ್‌ ನ್ಯಾನ್ಸಿ ಪೆಲೋಸಿ ಸಹ ವಾಗ್ದಂಡನೆ ಪ್ರಸ್ತಾವವನ್ನು ಬೆಂಬಲಿಸಲಿಲ್ಲ.

ಡೆಮಾಕ್ರಟಿಕ್‌ ಪಕ್ಷದ ಸದಸ್ಯರಿಂದಲೇ ಹೆಚ್ಚಿನ ಬೆಂಬಲ ದೊರೆಯದಿರುವುದಕ್ಕೆ ಪ್ರತಿಕ್ರಿಯಿಸಿದ ಗ್ರೀನ್‌, ‘ವಾಗ್ದಂಡನೆ ಪ್ರಸ್ತಾವ ವಿಫಲವಾಗಿಲ್ಲ. ಈ ಬಾರಿ 95 ಮತಗಳು ದೊರೆತಿವೆ. ಕಳೆದ ಬಾರಿ 65 ಮತಗಳಷ್ಟೇ ದೊರೆತಿದ್ದವು. ಹೀಗಾಗಿ, ಹೆಚ್ಚಿನ ಸದಸ್ಯರ ಬೆಂಬಲ ದೊರೆತಿದೆ. 95 ಅಥವಾ 5 ಮುಖ್ಯವಲ್ಲ. ಆಡಳಿತದ ವೈಫಲ್ಯಗಳನ್ನು ಪರಿಣಾಮಕಾರಿಯಾಗಿ ಹೇಳುವುದು ಮುಖ್ಯ‘ ಎಂದು ಪ್ರತಿಪಾದಿಸಿದರು.

‘ಸ್ಪೀಕರ್‌ ಅವರನ್ನು ಗೌರವಿಸುತ್ತೇನೆ. ಅವರಿಗೆ ಸರಿ ಅನಿಸಿದ್ದನ್ನು ಮಾಡುತ್ತಾರೆ. ನನಗೆ ಯಾವುದು ಸರಿ ಅನಿಸುತ್ತದೆಯೊ ಅದನ್ನು ನಾನು ಮಾಡುತ್ತೇನೆ‘ ಎಂದರು.

ವಾಗ್ದಾಂಡನೆ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ ಟ್ರಂಪ್‌, ಇದೊಂದು ಹಾಸ್ಯಾಸ್ಪದ ಎಂದು ವ್ಯಂಗ್ಯವಾಡಿದರು.

ಸದನದ ಯಾವುದೇ ಸದಸ್ಯರು ವಾಗ್ದಂಡನೆಗೆ ಒತ್ತಾಯಿಸಬಹುದು. ಗ್ರೀನ್‌ ಅವರು ಈ ಮೊದಲು ಎರಡು ಬಾರಿ ವಾಗ್ದಂಡನೆ ಪ್ರಸ್ತಾವವನ್ನು ಮಂಡಿಸಿದ್ದರು.

***

ವಾಗ್ದಂಡನೆ ವಿರುದ್ಧ ಈ ಬಾರಿ ಹೆಚ್ಚು ಮತಗಳು ಬಂದಿವೆ. ಇಂಥ ಪ್ರಸ್ತಾವ ಇನ್ನು ಮುಂದೆ ಇರುವುದಿಲ್ಲ ಎನ್ನುವ ಆಶಾಭಾವ ನನ್ನದು. ಎಂದಿನಂತೆ ಕೆಲಸದಲ್ಲಿ ತೊಡಗುತ್ತೇನೆ.

-ಡೊನಾಲ್ಡ್‌ ಟ್ರಂಪ್‌, ಅಮೆರಿಕ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT