ರಷ್ಯಾ ಶಸ್ತ್ರಾಸ್ತ್ರ ಖರೀದಿಗೆಇದ್ದ ನಿರ್ಬಂಧ ನಿವಾರಣೆ ಮಸೂದೆಗೆ ಅಮೆರಿಕ ಅನುಮೋದನೆ

7

ರಷ್ಯಾ ಶಸ್ತ್ರಾಸ್ತ್ರ ಖರೀದಿಗೆಇದ್ದ ನಿರ್ಬಂಧ ನಿವಾರಣೆ ಮಸೂದೆಗೆ ಅಮೆರಿಕ ಅನುಮೋದನೆ

Published:
Updated:

ವಾಷಿಂಗ್ಟನ್‌: ರಷ್ಯಾದಿಂದ ಶಸ್ತ್ರಾಸ್ತ್ರಗಳನ್ನು ಖರೀದಿಸುವುದಕ್ಕೆ ವಿಧಿಸಿದ್ದ ನಿರ್ಬಂಧಗಳನ್ನು ತೆಗೆದು ಹಾಕುವ ರಕ್ಷಣಾ ವೆಚ್ಚ ಮಸೂದೆಗೆ ಅಮೆರಿಕ ಸೆನೆಟ್‌ನಲ್ಲಿ ಒಪ್ಪಿಗೆ ದೊರೆತಿದೆ. ಇದರಿಂದಾಗಿ ರಷ್ಯಾದಿಂದ ಶಸ್ತ್ರಾಸ್ತ್ರಗಳನ್ನು ಖರೀದಿಸುವ ಮಹತ್ವದ ವ್ಯವಹಾರಗಳನ್ನು ಮುಂದುವರಿಸಲು ಭಾರತದಂತಹ ರಾಷ್ಟ್ರಗಳಿಗೆ ಇದರಿಂದ ನಿರಾಳವಾಗಿದೆ.

ಸದ್ಯ ರಾಷ್ಟ್ರೀಯ ರಕ್ಷಣಾ ಅಧಿಕಾರ ಕಾಯಿದೆ(ಎನ್‌ಡಿಎಎ)– 2019ಕ್ಕೆ ಅನುಮೋದನೆ ದೊರತಿದ್ದು, ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅಂಕಿತ ಹಾಕುವುದಷ್ಟೇ ಬಾಕಿಯಿದೆ.

‘ಎನ್‌ಡಿಎಎ–2019 ಮಸೂದೆಯನ್ನು ಅನುಮೋದಿಸುವಲ್ಲಿ ಸೆನೆಟ್‌ನ ಎರಡೂ ಬಣಗಳು ತೋರಿದ ಬದ್ಧತೆಗೆ ಕೃತಜ್ಞನಾಗಿದ್ದೇನೆ. ಇದೀಗ ಮಸೂದೆಯನ್ನು ಕಾರ್ಯಗತಗೊಳಿಸುವ ಜವಾಬ್ದಾರಿ ನಮ್ಮ ಮೇಲಿದ್ದು, ಕಾರ್ಯಕ್ಷಮತೆ ಮತ್ತು ಹೊಣೆಗಾರಿಕೆಯನ್ನು ಪ್ರದರ್ಶಿಸಬೇಕಿದೆ’ ಎಂದು ರಕ್ಷಣಾ ಕಾರ್ಯದರ್ಶಿ ಜೇಮ್ಸ್‌ ಎನ್‌. ಮ್ಯಾಟೀಸ್‌ ಹೇಳಿದ್ದಾರೆ.

‘ನಿರ್ಬಂಧಗಳ ಮೂಲಕ ಅಮೆರಿಕಾದ ಎದುರಾಳಿಗಳನ್ನು ನಿಯಂತ್ರಿಸುವ ಕಾಯಿದೆ(ಸಿಎಎಟಿಎಸ್‌ಎ) ಅಡಿಯಲ್ಲಿ ಅಮೆರಿಕಾ ತನ್ನ ಪಾಲುದಾರ ರಾಷ್ಟ್ರಗಳಿಗೆ ರಷ್ಯಾ ಸಂಬಂಧಿತ ವ್ಯವಹಾರಗಳಲ್ಲಿ ವಿಧಿಸಿದ್ದ ನಿಷೇಧವನ್ನು ಈ ಮಸೂದೆ ಪರಿಹರಿಸಲಿದೆ’ ಎಂದೂ ಅವರು ಸೆನೆಟ್‌ನಲ್ಲಿ ತಿಳಿಸಿದ್ದಾರೆ.

ಎನ್‌ಡಿಎಎ–2019 ಮಸೂದೆಯು ಸಿಎಎಟಿಎಸ್‌ಎ ಕಾಯಿದೆಗೆ ತಿದ್ದುಪಡಿ ತರಲಿದೆ. ಇನ್ನು ಮುಂದೆ ಭಾರತವು ರಷ್ಯಾ ಜೊತೆಗಿನ ಖರೀದಿ ವ್ಯವಹಾರವನ್ನು ಮುಂದುವರಿಸಬಹುದಾಗಿದೆ.

ರಾಜ್ಯ ಕಾರ್ಯದರ್ಶಿ ಮೈಕ್‌ ಪೊಂಪೆ ಅವರ ಬೆಂಬಲದೊಂದಗೆ ಸೆನೆಟ್‌ನಲ್ಲಿ ಮಸೂದೆ ಪರ ವಾದಿಸಿದ ಮ್ಯಾಟಿಸ್‌, ರಷ್ಯಾ ಜೊತೆ ವ್ಯವಹರಿಸದಂತೆ ನಿರ್ಬಂಧ ವಿಧಿಸುವ ಮೂಲಕ ಈ ರಾಷ್ಟ್ರಗಳನ್ನು ಮಾಸ್ಕೋಗೆ ಮತ್ತಷ್ಟು ಹತ್ತಿರ ಮಾಡುತ್ತಿದ್ದೇವೆ ಎಂದು  ಎಂದು ಪ್ರತಿಪಾದಿಸಿದ್ದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !