ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಿಟನ್‌: ಬೋರಿಸ್‌ ಗೆಳತಿಗೆ ಗಂಡು ಮಗು

Last Updated 29 ಏಪ್ರಿಲ್ 2020, 22:55 IST
ಅಕ್ಷರ ಗಾತ್ರ

ಲಂಡನ್: ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಗೆಳತಿ ಕ್ಯಾರಿ ಸಿಮಂಡ್ಸ್‌ ಅವರು ಬುಧವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಸಿಮಂಡ್ಸ್‌ ಮತ್ತು ಮಗು ಆರೋಗ್ಯವಾಗಿದ್ದಾರೆ. ವೈದ್ಯಕೀಯ ಸೇವೆ ಒದಗಿಸಿದ ರಾಷ್ಟ್ರೀಯ ಆರೋಗ್ಯ ಸೇವೆಯ ಹೆರಿಗೆ ವಿಭಾಗದ ತಂಡಕ್ಕೆ ಪ್ರಧಾನಿ ಮತ್ತು ಸಿಮಂಡ್ಸ್‌ ಧನ್ಯವಾದ ಸಲ್ಲಿಸಿದ್ದಾರೆ ಎಂದು ಲಂಡನ್‌ ಆಸ್ಪತ್ರೆಯ ವಕ್ತಾರರು ತಿಳಿಸಿದ್ದಾರೆ.

55 ವರ್ಷದ ಜಾನ್ಸನ್‌ ಅವರು 32 ವರ್ಷದ ಸಿಮಂಡ್ಸ್‌ ಜತೆಗೆ 2019ರಿಂದಲೇ ಸಂಬಂಧ ಹೊಂದಿದ್ದರು. ಕನ್ಸರೇಟಿವ್‌ ಪಕ್ಷದ ಸಂವಹನ ವಿಭಾಗದ ಮುಖ್ಯಸ್ಥರಾಗಿ ಸಿಮಂಡ್ಸ್‌ ಈ ಹಿಂದೆ ಕಾರ್ಯನಿರ್ವಹಿಸಿದ್ದರು.

‘ತಾವಿಬ್ಬರು ಶೀಘ್ರ ಮದುವೆಯಾಗಲಿದ್ದು, ಬೇಸಿಗೆ ವೇಳೆಗೆ ಮಗು ಜನಿಸುವ ನಿರೀಕ್ಷೆ ಇದೆ’ ಎಂದು ಬೋರಿಸ್‌ ಮತ್ತು ಸಿಮಂಡ್ಸ್‌ ಫೆಬ್ರುವರಿಯಲ್ಲಿ ಘೋಷಿಸಿದ್ದರು.

ಕಳೆದ ವರ್ಷ ಅಂತ್ಯಕ್ಕೆ ಬೋರಿಸ್‌ ಜತೆ ನಿಶ್ಚಿತಾರ್ಥ ನಡೆದಿದೆ ಎಂದು ಸಿಮಂಡ್ಸ್‌ ಇನ್‌ಸ್ಟಾಗ್ರಾಮ್‌ ಮೂಲಕ ಬಹಿರಂಗಪಡಿಸಿದ್ದರು.

ಕೊರೊನಾ ವೈರಸ್‌ ಸೋಂಕಿಗೆ ಒಳಗಾಗಿ ಗುಣಮುಖರಾಗಿದ್ದ ಜಾನ್ಸನ್‌ ಸೋಮವಾರ ಕರ್ತವ್ಯಕ್ಕೆ ಹಾಜರಾಗಿದ್ದರು. ಸಿಮಂಡ್ಸ್‌ ಅವರಲ್ಲಿಯೂ ಸೋಂಕಿನ ಲಕ್ಷಣಗಳು ಕಂಡು ಬಂದಿದ್ದವು. ಬಳಿಕ ಮನೆಯಲ್ಲೇ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು.

ಪರಿಸರವಾದಿಯಾಗಿರುವ ಸಿಮಂಡ್ಸ್‌, ಕೆಲವು ಚಳವಳಿಯಲ್ಲಿಯೂ ಭಾಗವಹಿಸಿದ್ದರು. ಜಾನ್ಸನ್‌ ಅವರಿಗೆ ಈಗಾಗಲೇ ಐವರು ಮಕ್ಕಳಿದ್ದಾರೆ ಎಂದು ಹೇಳಲಾಗಿದೆ. ಇವರಲ್ಲಿ ಎರಡನೇ ಪತ್ನಿ ಮರಿನಾ ವೀಲರ್‌ಗೆ ನಾಲ್ವರು ಜನಿಸಿದ್ದಾರೆ. ಮರಿನಾ ಅವರಿಂದ 2018ರಲ್ಲಿ ಜಾನ್ಸನ್‌ ದೂರವಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT