ಅಂತರಂಗದ ಭಾವನೆಗಳಿಗೆ ಮೂರ್ತರೂಪ

7

ಅಂತರಂಗದ ಭಾವನೆಗಳಿಗೆ ಮೂರ್ತರೂಪ

Published:
Updated:
Buddha

ಧ್ಯಾನ ಭಂಗಿಯಲ್ಲಿ ತಾವರೆ ಹೂವನ್ನು ಹಿಡಿದಿರುವ ಬುದ್ಧ, ತಾಯಿ ಯಶೋಧೆಯ ಪಾದವನ್ನು ಸ್ಪರ್ಶಿಸಿ ಆಶಿರ್ವಾದ ಪಡೆಯುತ್ತಿರುವ ಮುದ್ದು ಕೃಷ್ಣ, ಶ್ರೀ ಕೃಷ್ಣನ ಭಜಿಸುತ್ತಾ ಭಾವಪರವಶಳಾಗಿ ಕುಂತಿರುವ ಮೀರಬಾಯಿ, ಸುಂದರವಾದ ಕುದುರೆ, ಹಸಿರನ್ನು ಹೊದ್ದು ಕಂಗೊಳಿಸುತ್ತರುವ ಪ್ರಕೃತಿಯ ನೋಟದ ಸುಂದರವಾದ ಚಿತ್ರಗಳು ಕಲಾವಿದನ ಕುಂಚದಲ್ಲಿ ಹರಳಿವೆ. ತಮ್ಮ ಕಲ್ಪನೆಗಳಿಗೆ ವಿಭಿನ್ನ ರೂಪ ನೀಡುವ ಮೂಲಕ ಸರಳವಾಗಿ ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ  ಚಿತ್ರಿಸಿದ್ದಾರೆ ಕಲಾವಿದ ಪ್ರವೀಣ ಲೆಂಡ್ವೆ.

ಸಾವಿರ ಪದಗಳಲ್ಲಿ ಹೇಳಲಾಗದ್ದನ್ನು ಒಂದು ಚಿತ್ರವು ಆಂತರ್ಯವನ್ನು ಮುಟ್ಟುತ್ತವೆ. ಭಾವಗಳು ಬಣ್ಣಗಳಿಂದ ಜೀವ ಪಡೆದು ಹಲವು ಬಗೆಯ ಚಿತ್ರಗಳು ಮೂರ್ತರೂಪ ಪಡೆದುಕೊಂಡಿರುವಂತಹ ಚಿತ್ರಕಲೆಯ ಪ್ರದರ್ಶನವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಇದೇ  ಬೆಂಗಳೂರಿನ ಬಿಟಿಎಮ್‌ ಲೇಔಟ್‌ನ ಇರಾ ಆರ್ಟ್ ಗ್ಯಾಲರಿಯಲ್ಲಿ ಚಿತ್ರಕಲಾ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.   

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಕಿತ್ತಳಿ ಗ್ರಾಮದವರಾದ ಪ್ರವೀಣ ಲೆಂಡ್ವೆ ಅವರ ತಂದೆ ದಾಮೊದರ್ ಎಲ್ ಲೆಂಡ್ವೆ ಹಾಗೂ ತಾಯಿ ಜಂಗಮಾಬಾಯಿ. ಲಲಿತ ಕಲೆಯಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನು ಪಡೆದಿರುವ ಇವರು ಬೆಂಗಳೂರಿನ ಹೆಚ್‌ಎಸ್‌ಆರ್ ಲೇಔಟ್‌ನ ಜೆಎಸ್‌ಎಸ್‌ ಪಬ್ಲಿಕ್ ಶಾಲೆಯಲ್ಲಿ ಚಿತ್ರ ಕಲಾ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕಾಲೇಜು ದಿನಗಳಿಂದಲೇ ಚಿತ್ರಕಲೆಯಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡಿರುವ ಇವರು ಚಿತ್ರಕಲೆಯಲ್ಲಿ ತಮ್ಮ ವೃತ್ತಿಯನ್ನು ರೂಪಸಿಕೊಂಡಿದ್ದಾರೆ. ಈ ಹಿಂದೆ ಹಲವು ಬಾರಿ ಬೆಂಗಳೂರಿನ ಚಿತ್ರಕಲಾ ಪರಿಷತ್‌ನಲ್ಲಿ ಆಯೋಜಿಸಲಾಗಿದ್ದ ಸಾಮೂಹಿಕ ಚಿತ್ರಕಲಾ ಪ್ರದರ್ಶನದಲ್ಲಿ ತಮ್ಮ ಚಿತ್ರಕಲೆಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದರು. ಹಾಗೆಯೇ ಬೆಳಗಾವಿ, ಕಲಬುರ್ಗಿ, ಧಾರವಾಡ ಮುಂತಾದ ಕಡೆ ತಮ್ಮ ಚಿತ್ರ ಕಲಾ ಪ್ರದರ್ಶನ ಏರ್ಪಡಿಸಿದ್ದರು. ಹೆಚ್ಚಾಗಿ ಪ್ರಕೃತಿ, ಪರಿಸರದ ಬಗ್ಗೆ ಕಲಾಚಿತ್ರಗಳನ್ನು ಬಿಡಿಸಿರುವ ಇವರು ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ತಮ್ಮ ಚಿತ್ರಕಲಾ ನೈಪುಣ್ಯಕ್ಕಾಗಿ 2009ರಲ್ಲಿ ಕಲಾಮ ಕಲರ್ಸ್ ಪ್ರಶಸ್ತಿ, 2012 ರಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಯುವ ಉತ್ಸವ ಪುರಸ್ಕಾರವನ್ನು ಪಡೆದಿದ್ದಾರೆ.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !