ಬುಧವಾರ, ಜನವರಿ 29, 2020
30 °C

ಅಮೆರಿಕದಲ್ಲಿ ಗುಂಡಿನ ದಾಳಿ: ಭಾರತೀಯ ವಾಯುಪಡೆ ಮುಖ್ಯಸ್ಥ ಬಧೌರಿಯಾ ಸುರಕ್ಷಿತ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಅಮೆರಿಕದ ಪರ್ಲ್‌ ಹಾರ್ಬರ್‌ ಶಿಪ್‌ಯಾರ್ಡ್‌ನಲ್ಲಿ ಗುರುವಾರ ಗುಂಡಿನ ದಾಳಿ ನಡೆದಿದೆ. ಸಮೀಪದಲ್ಲೇ ಇರುವ ಮಿಲಿಟರಿಪ್ರದೇ ಶದಲ್ಲಿರುವ ಭಾರತದ ವಾಯುಪಡೆ ಮುಖ್ಯಸ್ಥ ರಾಕೇಶ್‌ ಕುಮಾರ್‌ ಸಿಂಗ್‌ ಬಧೌರಿಯಾ ಅವರು ಸುರಕ್ಷಿತವಾಗಿದ್ದಾರೆ.

ಇಂಡೋ–ಪೆಸಿಫಿಕ್‌ ಪ್ರದೇಶದಲ್ಲಿ ಭದ್ರತೆ ಕುರಿತು ನಡೆಯಲಿರುವ ಪ್ರಮುಖ ದೇಶಗಳ ವಾಯುಪಡೆಯ ಮುಖ್ಯಸ್ಥರ ಸಭೆಯಲ್ಲಿ ಭಾಗವಹಿಸಲು ಅವರು ಹವಾಯಿಗೆ ತೆರಳಿದ್ದಾರೆ. 

ಐಎಎಫ್ ಮುಖ್ಯಸ್ಥರು ಮತ್ತು ಅವರ ತಂಡ ಸುರಕ್ಷಿತವಾಗಿದೆ ಎಂದು ಐಎಎಫ್ ವಕ್ತಾರರು ತಿಳಿಸಿದ್ದಾರೆ. ಬಧೌರಿಯಾ ಅವರು ಪರ್ಲ್‌ ಹಾರ್ಬರ್‌ನಲ್ಲಿರುವ ವಾಯುಪಡೆಯ ಪ್ರದೇಶದಲ್ಲಿದ್ದಾರೆ. ಗುಂಡಿನ ದಾಳಿ ನಡೆದಿದ್ದು ನೌಕಾಪಡೆಯ ಪ್ರದೇಶದಲ್ಲಿ ಎಂದು ಮತ್ತೊಬ್ಬ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು