ಸೌದಿಯಲ್ಲಿ ಸಿಲುಕಿದ 14 ಭಾರತೀಯರು

7

ಸೌದಿಯಲ್ಲಿ ಸಿಲುಕಿದ 14 ಭಾರತೀಯರು

Published:
Updated:

ಶಿಮ್ಲಾ: ಸೌದಿ ಅರೇಬಿಯಾದಲ್ಲಿ 14 ಭಾರತೀಯರು ಸಿಕ್ಕಿಹಾಕಿಕೊಂಡಿದ್ದು, ಇವರಲ್ಲಿ ಬಹುತೇಕರನ್ನು ಸ್ಥಳೀಯ ಟ್ರಾವೆಲ್ ಏಜೆಂಟರು ಪ್ರವಾಸಿ ವೀಸಾದ ಮೇಲೆ ಕೆಲಸಕ್ಕೆ ನಿಯೋಜಿಸಿದ್ದರು ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ವಿವಿಧ ಜೈಲುಗಳಲ್ಲಿ ಬಂದಿಯಾಗಿರುವ ಇವರಲ್ಲಿ 12 ಮಂದಿ ಹಿಮಾಚಲ ಪ್ರದೇಶದವರಾಗಿದ್ದು ಉಳಿದಿಬ್ಬರು ಪಂಜಾಬ್‌ನವರು.

ಉದ್ಯೋಗ ವೀಸಾ ಕೊಡಿ ಸುವುದಾಗಿ 14 ಮಂದಿಯನ್ನೂ ನಂಬಿಸಿದ್ದ ಇಬ್ಬರು ಏಜೆಂಟರು ತಲಾ ₹ 90 ಸಾವಿರ ಪಡೆದು ವಂಚಿಸಿದ್ದಾರೆ. ಕೆಲಸಕ್ಕೆ ನಿಯೋಜಿಸಿದ್ದ ಕಂಪನಿಯು 3 ತಿಂಗಳ ಬಳಿಕ ಉದ್ಯೋಗ ವೀಸಾಕ್ಕೆ ವ್ಯವಸ್ಥೆ ಮಾಡುತ್ತದೆ ಎಂದು ತಿಳಿಸಲಾಗಿತ್ತು. ಆದರೆ, ಈಗ ಅವರ ಪ್ರವಾಸಿ ವೀಸಾ ಅವಧಿ ಮುಗಿದಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !