ಉತ್ತರ ಪ್ರದೇಶದಲ್ಲಿ ಮಳೆಗೆ 12 ಮಂದಿ ಬಲಿ

7

ಉತ್ತರ ಪ್ರದೇಶದಲ್ಲಿ ಮಳೆಗೆ 12 ಮಂದಿ ಬಲಿ

Published:
Updated:

ಲಖನೌ: ಕಳೆದ ರಾತ್ರಿ ಸುರಿದ ಮಹಾಮಳೆಯಿಂದಾಗಿ ಉತ್ತರ ಪ್ರದೇಶದಲ್ಲಿ 12 ಮಂದಿ ಸಾವಿಗೀಡಾಗಿದ್ದು, 14 ಜನರು ಗಾಯಗೊಂಡಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದರು. 

‘ಗೊಂಡಾ ಮತ್ತು ಖುಷಿನಗರ ಜಿಲ್ಲೆಯಲ್ಲಿ 3 ಜನ, ಮಿರ್ಝಾಪುರದಲ್ಲಿ ಇಬ್ಬರು ಹಾಗೂ ಈ ಬಹ್ರೈಚ್, ಸೀತಾಪುರ, ಮೀರತ್‌ ಮತ್ತು ಇಟಾ ನಗರದಲ್ಲಿ ತಲಾ ಒಬ್ಬರು ಸಾವಿಗೀಡಾಗಿದ್ದಾರೆ’ ಎಂದು ಪರಿಹಾರ ವಿಭಾಗದ ಆಯುಕ್ತ ಸಂಜಯ್‌ ಕುಮಾರ್‌ ಹೇಳಿದ್ದಾರೆ.

‘ಸೋಮವಾರ ತಡರಾತ್ರಿ ಸುರಿದ ಭಾರಿ ಮಳೆ ಮತ್ತು ಸಿಡಿಲಿನ ಹೊಡೆತಕ್ಕೆ 12 ಮಂದಿ ಬಲಿಯಾಗಿದ್ದು, 14 ಜನರು ಗಾಯಗೊಂಡಿದ್ದಾರೆ. ಮಳೆಯಿಂದಾಗಿ ರಾಜ್ಯದಲ್ಲಿ ಒಟ್ಟು 226 ಮನೆಗಳಿಗೆ ಹಾನಿಯಾಗಿದೆ’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 2

  Sad
 • 1

  Frustrated
 • 1

  Angry

Comments:

0 comments

Write the first review for this !