ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೃತ್ತ ಸ್ಕ್ವಾಡ್ರನ್‌ ಲೀಡರ್‌ ಪರ್ವೇಜ್‌ ನಿಧನ

Last Updated 26 ಜೂನ್ 2020, 12:26 IST
ಅಕ್ಷರ ಗಾತ್ರ

ಮುಂಬೈ: 1971ರ ಭಾರತ–ಪಾಕಿಸ್ತಾನ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನಿವೃತ್ತ ಸ್ಕ್ವಾಡ್ರನ್‌ ಲೀಡರ್‌ ಪರ್ವೇಜ್‌ ಜಮಸ್ಜಿ (77) ಗುರುವಾರ ರಾತ್ರಿ ನಿಧನರಾದರು.

ಯುದ್ಧದಲ್ಲಿನ ಶೌರ್ಯಕ್ಕೆ ಪರ್ವೇಜ್‌ ಅವರಿಗೆ ‘ವೀರ ಚಕ್ರ’ ಪ್ರಶಸ್ತಿ ನೀಡಲಾಗಿತ್ತು.

ಹೆಲಿಕಾಪ್ಟರ್‌ ಪೈಲಟ್‌ ಆಗಿದ್ದ ಅವರು ಯುದ್ಧದ ಸಂದರ್ಭದಲ್ಲಿ ಕೈಗೊಂಡ ಕಾರ್ಯಾಚರಣೆಯಲ್ಲಿ ಕಾಲಿಗೆ ಗಾಯವಾಗಿತ್ತು. ಹೀಗಾಗಿ, ಕೋಲು ಹಿಡಿದುಕೊಂಡು ನಡೆಯುತ್ತಿದ್ದರು. ಇವರಿದ್ದ ಹೆಲಿಕಾಪ್ಟರ್‌ ಮೇಲೆ ಮಷಿನ್‌ ಗನ್‌ನಿಂದ ಎರಡು ಬಾರಿ ದಾಳಿ ನಡೆಸಲಾಗಿತ್ತು. ಸಮಯ ಪ್ರಜ್ಞೆ ತೋರಿ ವಾಯು ನೆಲೆಗೆ ಸುರಕ್ಷಿತವಾಗಿ ಬಂದಿದ್ದರು.

ಅವರಿಗೆ ಪತ್ನಿ, ಇಬ್ಬರು ಪುತ್ರರು ಮತ್ತು ಪುತ್ರಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT