ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಮಾಣಿಕ ಕೈಗಳ ಕೊರತೆ!

ಅಕ್ಷರ ಗಾತ್ರ

ಸ್ವಾತಂತ್ರ್ಯ ದೊರೆತ ನಂತರದ ಎರಡು–ಮೂರು ದಶಕಗಳ ಕಾಲ ಬಡತನ, ಅನಕ್ಷರತೆಯಂಥ ಹಲವು ಗಂಭೀರ ಸಮಸ್ಯೆಗಳಿಂದ ದೇಶ ಬಳಲಿತ್ತು. ಆದರೆ ಅಂದಿನ ಸ್ಥಿತಿಗೂ ಇಂದಿನ ಸ್ಥಿತಿಗೂ ಬಹಳ ವ್ಯತ್ಯಾಸವಿದೆ. ವಿಶ್ವದ ಶ್ರೀಮಂತ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತಕ್ಕೂ ಈಗ ಒಂದು ಸ್ಥಾನ ಇದೆ. ಇದಕ್ಕೆ ಕರ್ನಾಟಕದ ಕೊಡುಗೆಯೂ ಇದೆ.

ಕರ್ನಾಟಕದಲ್ಲಿ ನೈಸರ್ಗಿಕ ಸಂಪನ್ಮೂಲಗಳಿಗೆ ಕೊರತೆಯಿಲ್ಲ. ಆದರೆ ರಾಜ್ಯದ ಸರ್ಮತೋಮುಖ ಅಭಿವೃದ್ಧಿಗಾಗಿ ದುಡಿಯುವ ಪ್ರಾಮಾಣಿಕ ಕೈಗಳ ಕೊರತೆಯಿದೆ! ರೈತರ ಆತ್ಮಹತ್ಯೆಗಳಿಗೆ ಇನ್ನೂ ಪೂರ್ಣವಿರಾಮ ಬಿದ್ದಿಲ್ಲ.

ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸುವುದು ಹೊಸ ಸರ್ಕಾರಕ್ಕೆ ಆದ್ಯತೆ ಆಗಬೇಕು. ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ದೊರಕಿಸಿಕೊಡಬೇಕು. ಅದಕ್ಕಾಗಿ ಆವರ್ತ ನಿಧಿ ಸ್ಥಾಪಿಸಬೇಕು. ಪ್ರಣಾಳಿಕೆಯಲ್ಲಿ ಹೇಳಿಕೊಂಡಂತೆ ರೈತರ ಸಂಪೂರ್ಣ ಸಾಲಮನ್ನಾ ಆಗಬೇಕು.

ಸಿದ್ದರಾಮಯ್ಯ ನೇತೃತ್ವದ ಸರ್ಕಾರ ‘ಭಾಗ್ಯ’ ಹೆಸರಿನಲ್ಲಿ ಕೆಲವು ಜನಪ್ರಿಯ ಯೋಜನೆಗಳನ್ನು ಜಾರಿಗೊಳಿಸಿದೆ. ಅವುಗಳ ಪೈಕಿ ಹೆಚ್ಚು ಉಪಯುಕ್ತ ಹಾಗೂ ಅವಶ್ಯಕವೆನಿಸುವ ‘ಭಾಗ್ಯ’ಗಳನ್ನಿಟ್ಟುಕೊಂಡು ಅನಗತ್ಯ ಎನ್ನಬಹುದಾದ ಭಾಗ್ಯಗಳನ್ನು ಕೈಬಿಡಬೇಕು. ಜನಪ್ರಿಯ ಯೋಜನೆಗಳನ್ನು ತುಸು ಹಿಂದಕ್ಕೆ ಸರಿಸಿ ದೂರದೃಷ್ಟಿಯುಳ್ಳ ಜನಪರ ಯೋಜನೆಗಳಿಗೆ ಆದ್ಯತೆ ನೀಡಬೇಕು. ಆರೋಗ್ಯ ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT