ಬಿಸಿಲಿಗೆ ಉತ್ತರ ತತ್ತರ: 50 ಡಿಗ್ರಿ ಸೆಲ್ಸಿಯಸ್‌ ಮೀರಿದ ತಾಪಮಾನ

ಬುಧವಾರ, ಜೂನ್ 26, 2019
26 °C

ಬಿಸಿಲಿಗೆ ಉತ್ತರ ತತ್ತರ: 50 ಡಿಗ್ರಿ ಸೆಲ್ಸಿಯಸ್‌ ಮೀರಿದ ತಾಪಮಾನ

Published:
Updated:
Prajavani

ನವದೆಹಲಿ: ಉತ್ತರ ಭಾರತದ ಹಲವು ರಾಜ್ಯಗಳು ಸುಡು ಬಿಸಿಲು ಮತ್ತು ಬಿಸಿಗಾಳಿಗೆ ತತ್ತರಿಸಿವೆ. ಮುಂದಿನ ಐದು ದಿನಗಳಲ್ಲಿ ಉಷ್ಣಾಂಶ ಇನ್ನಷ್ಟು ಏರಿಕೆಯಾಗುವ ಅಥವಾ ಯಥಾಸ್ಥಿತಿ ಮುಂದುವರಿಯುವ ಸೂಚನೆಗಳಿವೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. 

ಸೋಮವಾರ ಬೆಳಿಗ್ಗೆ ದಾಖಲಾಗಿ ರುವಂತೆ ಕಳೆದ 24 ಗಂಟೆಗಳಲ್ಲಿ ದಿನದ ಗರಿಷ್ಠ ತಾಪಮಾನ ಪೂರ್ವ ರಾಜಸ್ಥಾನದ ಚುರುವಿನಲ್ಲಿ 48.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಭಾನುವಾರ ಬೆಳಿಗ್ಗೆ ಇಲ್ಲಿ ದಾಖಲಾಗಿದ್ದ ಗರಿಷ್ಠ ಉಷ್ಣಾಂಶ 50.8 ಡಿಗ್ರಿ ಸೆಲ್ಸಿಯಸ್‌.

ಮುಂದಿನ 24 ಗಂಟೆಗಳ ಅವಧಿಯಲ್ಲಿ ಉತ್ತರ ಭಾರತದ ರಾಜ್ಯಗಳಲ್ಲಿ ಉಷ್ಣಾಂಶ ಸಾಮಾನ್ಯಕ್ಕಿಂತಲೂ ಗರಿಷ್ಠ 5.1 ಡಿಗ್ರಿ ಸೆಲ್ಸಿಯಸ್‌ ಹಾಗೂ ಕನಿಷ್ಠ 3.1 ಡಿಗ್ರಿ ಸೆಲ್ಸಿಯಸ್‌ವರೆಗೂ ಏರಿಕೆಯಾಗಬಹುದು.

ಮುನ್ನೆಚ್ಚರಿಕೆ

ಕರ್ನಾಟಕದ ಉತ್ತರದ ಜಿಲ್ಲೆಗಳು, ನೆರೆ ರಾಜ್ಯಗಳು ಸೇರಿ ಉಷ್ಣಾಂಶ ಅಧಿಕವಾಗಿರುವ ರಾಜ್ಯಗಳಲ್ಲಿ ಮುಂದಿನ ಎರಡು–ಮೂರು ದಿನ ತಾಪಮಾನ ಇನ್ನಷ್ಟು ಏರಲಿದೆ. ಸಹಜ ಆರೋಗ್ಯದ ಜನರು ಈ ತಾಪಮಾನವನ್ನು ಸಹಿಸಿಕೊಳ್ಳಬಹುದು. ಆದರೆ, ವಯಸ್ಕರು, ಮಕ್ಕಳು, ಅನಾರೋಗ್ಯಪೀಡಿತರು ಆದಷ್ಟು ನೆರಳಿನ ಆಶ್ರಯದಲ್ಲಿ ಇರುವುದು ಉತ್ತಮ.

 

 

 

 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !