ಗುರುವಾರ , ಮಾರ್ಚ್ 4, 2021
30 °C

ಹರ್ಷ ಮೊಯ್ಲಿ ಕಂಪೆನಿಯಲ್ಲಿ ವಿದೇಶಿ ಸಂಸ್ಥೆ ಹೂಡಿಕೆ ಮಾಡಿದ್ದು ಹೇಗೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹರ್ಷ ಮೊಯ್ಲಿ ಕಂಪೆನಿಯಲ್ಲಿ ವಿದೇಶಿ ಸಂಸ್ಥೆ ಹೂಡಿಕೆ ಮಾಡಿದ್ದು ಹೇಗೆ?

ನವದೆಹಲಿ: ಕೇಂದ್ರದ ಮಾಜಿ ಸಚಿವ ವೀರಪ್ಪ ಮೊಯ್ಲಿ ಅವರ ಮಗ ಹರ್ಷ ಮೊಯ್ಲಿ ಅವರ ಕಂಪೆನಿ ‘ಮೋಕ್ಷ ಯುಗ್–ಆ್ಯಕ್ಸೆಸ್ ಪ್ರೈವೇಟ್ ಲಿಮಿಟೆಡ್ (ಎಂವೈಎ)’ ತನ್ನ ಷೇರುದಾರ ಕಂಪೆನಿ ಮೂಲಕ ವಿದೇಶಿ ಕಂಪೆನಿಗಳಿಂದ ಹೂಡಿಕೆ ಸ್ವೀಕರಿಸಿತ್ತು ಎಂಬುದು ಪ್ಯಾರಡೈಸ್ ಪೇಪರ್ಸ್ ಪಟ್ಟಿಯಿಂದ ಬೆಳಕಿಗೆ ಬಂದಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

‘ಮೋಕ್ಷ ಯುಗ್–ಆ್ಯಕ್ಸೆಸ್'ನ ಷೇರುದಾರ ಕಂಪೆನಿ ‘ಯುಐಪಿ ಎಂವೈಎ ಎಲ್‌ಎಲ್‌ಸಿ’ಯು ‘ಯುನಿಟಸ್‌ ಇಂಪ್ಯಾಕ್ಟ್ ಪಿಸಿಸಿ’ ಎಂಬ ವಿದೇಶಿ ಕಂಪೆನಿ ಜತೆ 2012ರಲ್ಲಿ ಷೇರು ಖರೀದಿ ಒಪ್ಪಂದ ಮಾಡಿಕೊಂಡಿತ್ತು.

2015ರ ಮಾರ್ಚ್ 15ರಂದು ಮಾಡಿಕೊಂಡಿದ್ದ ಒಪ್ಪಂದದಲ್ಲಿ ‘ಮೋಕ್ಷ ಯುಗ್ ಆ್ಯಕ್ಸೆಸ್‌’ನಲ್ಲಿ ಹೂಡಿಕೆ ಮಾಡುವ ಸಲುವಾಗಿ ಯುನಿಟಸ್ ಇಂಪ್ಯಾಕ್ಟ್‌ನಿಂದ ₹ 4.76 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿರುವುದಾಗಿ ‘ಯುಐಪಿ ಎಂವೈಎ ಎಲ್‌ಎಲ್‌ಸಿ’ ಹೇಳಿತ್ತು.

ಆದರೆ, ಒಪ್ಪಂದ ಮಾಡಿಕೊಳ್ಳುವುದಕ್ಕೂ ಮುನ್ನ ‘ಯುಐಪಿ ಎಂವೈಎ ಎಲ್‌ಎಲ್‌ಸಿ’ ಕಂಪೆನಿಯು ಷೇರುದಾರರ ಸಭೆ ನಡೆಸಿ ಯಾವುದೇ ನಿರ್ಣಯ ಕೈಗೊಂಡಿರಲಿಲ್ಲ. ಅಲ್ಲದೆ, ಕಂಪೆನಿ ಸ್ವೀಕರಿಸಿದ ಹೂಡಿಕೆಯ ಮೂಲದ ಬಗ್ಗೆಯೂ ಮಾಹಿತಿ ಬಹಿರಂಗಪಡಿಸಿರಲಿಲ್ಲ. ಇದು ಅನುಮಾನಗಳನ್ನು ಹುಟ್ಟುಹಾಕಿದೆ. ಅಲ್ಲದೆ, ‘ಯುಐಪಿ ಎಂವೈಎ ಎಲ್‌ಎಲ್‌ಸಿ’ಯಲ್ಲಿರುವ ಬಹುತೇಕ ಷೇರುದಾರರು ಅನಾಮಿಕರಾಗಿರುವುದೂ ಬೆಳಕಿಗೆ ಬಂದಿದೆ.

ದಾಖಲೆಗಳ ಪ್ರಕಾರ, ಹರ್ಷ ಮೊಯ್ಲಿ ಅವರು ಮೋಕ್ಷ ಯುಗ್ ಆ್ಯಕ್ಸೆಸ್ ಕಂಪೆನಿಯಲ್ಲಿ (2012ರಲ್ಲಿ) ಶೇಕಡಾ 37.24ರಷ್ಟು ಷೇರುಗಳನ್ನು (31.97 ಲಕ್ಷ) ಹೊಂದಿದ್ದಾರೆ. ಮಾರಿಷಸ್ ಯುನಿಟಸ್ ಕಾರ್ಪೊರೇಷನ್ ಶೇಕಡಾ 26.33ರಷ್ಟು ಷೇರುಗಳನ್ನು (22.61 ಷೇರುಗಳನ್ನು) ಹೊಂದಿದೆ. ವಿನೋದ್ ಖೋಸ್ಲಾ ಶೇಕಡಾ 17.37ರಷ್ಟು (14.92 ಲಕ್ಷ ಷೇರುಗಳು) ಮತ್ತು ಎಂವೈಎ ಎಂಪ್ಲಾಯೀಸ್ ಸ್ಟಾಕ್ ಟ್ರಸ್ಟ್ ಶೇಕಡಾ 7.29ರಷ್ಟು (6.26 ಲಕ್ಷ ಷೇರುಗಳು) ಷೇರುಗಳನ್ನು ಹೊಂದಿವೆ.

ಇದನ್ನೂ ಓದಿ...

ಪ್ಯಾರಡೈಸ್ ಪೇಪರ್ಸ್ ಬಹಿರಂಗ: ವೀರಪ್ಪ ಮೊಯ್ಲಿ ಪುತ್ರನ ಕಂಪೆನಿಯಲ್ಲಿ ವಿದೇಶಿ ಹೂಡಿಕೆ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.