‘2020ಕ್ಕೆ 5ಜಿ ಸೇವೆ ಲಭ್ಯ’

7

‘2020ಕ್ಕೆ 5ಜಿ ಸೇವೆ ಲಭ್ಯ’

Published:
Updated:

ನವದೆಹಲಿ: ದೂರಸಂಪರ್ಕ ಕ್ಷೇತ್ರದ ಆರ್ಥಿಕ ಬಿಕ್ಕಟ್ಟಿನ ನಡುವೆಯೂ, 5ಜಿ ಸೇವೆಗಳು 2020ರ ಹೊತ್ತಿಗೆ ಅನುಷ್ಠಾನಗೊಳ್ಳಲಿವೆ ಎಂದು ಸರ್ಕಾರ ಸೋಮವಾರ ಹೇಳಿದೆ. 

‘ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ಈ ಕುರಿತು ಶಿಫಾರಸುಗಳನ್ನು ಸಲ್ಲಿಸಿದೆ. ದೂರ ಸಂಪರ್ಕ ಇಲಾಖೆಯ ಕಾರ್ಯನಿರ್ವಹಣಾ ಸಮಿತಿ ಅವುಗಳ ಅಧ್ಯಯನ ನಡೆಸಿದೆ. 5ಜಿ ತರಂಗಾಂತರದ ಹರಾಜು ಪ್ರಕ್ರಿಯೆಯ ಯೋಜನೆ ಮುಂದಿನ ವರ್ಷದ ಜುಲೈ– ಆಗಸ್ಟ್‌ ತಿಂಗಳಲ್ಲಿ ಸಿದ್ಧವಾಗಲಿದೆ’ ಎಂದು ದೂರಸಂಪರ್ಕ ಇಲಾಖೆ ಕಾರ್ಯದರ್ಶಿ ಅರುಣಾ ಸುಂದರರಾಜನ್‌ ತಿಳಿಸಿದ್ದಾರೆ. 

‘ಹರಾಜು ಪ್ರಕ್ರಿಯೆಯ ಯೋಜನೆ ಸಿದ್ಧವಾದರೂ ಆಗಲೇ ಹರಾಜು ನಡೆಯಬಹುದು ಎಂದು ಹೇಳಲು ಸಾಧ್ಯವಿಲ್ಲ. ಆದರೆ, 2020ರ ಮಧ್ಯದ ಹೊತ್ತಿಗೆ ನಾವು ಹರಾಜಿಗೆ ಸಿದ್ಧರಾಗಿರುತ್ತೇವೆ. 2020ರಲ್ಲಿ ಇಡೀ ದೇಶದಲ್ಲಿ 5ಜಿ ಸೇವೆಗಳು ದೊರೆಯಬಹುದು ಎಂದು ಹೇಳಲಾಗದು. ಆದರೆ, ಚಾಲನೆಯಂತೂ ದೊರೆಯಲಿದೆ. ಸದ್ಯ ಈ ಕುರಿತು ಪ್ರಯೋಗಗಳು ನಡೆಯುತ್ತಿವೆ’ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !