ಶನಿವಾರ, ಡಿಸೆಂಬರ್ 7, 2019
19 °C
9-yr-old girl dies after being raped by her father in Rohtak

ಹರಿಯಾಣದಲ್ಲಿ 9 ವರ್ಷದ ಮಗಳ ಮೇಲೆ ತಂದೆ ಅತ್ಯಾಚಾರ: ಬಾಲಕಿ ಸಾವು

ಪಿಟಿಐ Updated:

ಅಕ್ಷರ ಗಾತ್ರ : | |

ಚಂಡೀಗಡ: ತಂದೆಯಿಂದಲೇ ಅತ್ಯಾಚಾರಕ್ಕೊಳಗಾದ ಒಂಬತ್ತು ವರ್ಷದ ಬಾಲಕಿ ಸಾವನ್ನಪ್ಪಿದ ಘಟನೆ ಹರಿಯಾಣದ ರೋಹ್ಟಕ್ ಜಿಲ್ಲೆಯಲ್ಲಿ ನಡೆದಿದೆ ಎಂದು ಬುಧವಾರ ಪೊಲೀಸರು ತಿಳಿಸಿದ್ದಾರೆ. 

ಅತ್ಯಾಚಾರಕ್ಕೊಳಗಾದ ಬಾಲಕಿಯ ತಾಯಿ ಮತ್ತು ತಂದೆ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. 

‘ನ. 27ರಂದು ಮನೆಗೆ ಬಂದಿದ್ದ ಪತಿ, ಮಗಳನ್ನು ತಮ್ಮ ಮನೆಗೆ ಕರೆದೊಯ್ದ, ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ’ ಎಂದು ಬಾಲಕಿಯ ತಾಯಿ ಆರೋಪಿಸಿದ್ದಾರೆ.

‘ಭಾನುವಾರ ಮಗಳನ್ನು ತಂದೆಯೇ, ತಾಯಿಯ ಮನೆಗೆ ವಾಪಸ್ ಬಿಟ್ಟಿದ್ದ. ಮರುದಿನ ಬಾಲಕಿಯ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ವಾಂತಿ ಮಾಡಿಕೊಂಡಿದ್ದಳು. ತಕ್ಷಣವೇ ತಾಯಿ, ಮಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದರಾದರೂ, ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಸಾವನ್ನಪ್ಪಿದಳು’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಬಾಲಕಿಯ ತಂದೆ ಬಿಹಾರದವನಾಗಿದ್ದು, ಆತನ ವಿರುದ್ಧ  ಐಪಿಸಿ ಸೆಕ್ಷನ್ 302 ಮತ್ತು ಪೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು