ವಿಮಾನ ಅಪಘಾತ: 97 ಮಂದಿಗೆ ಗಾಯ

7

ವಿಮಾನ ಅಪಘಾತ: 97 ಮಂದಿಗೆ ಗಾಯ

Published:
Updated:
Deccan Herald

ದುರಂಗೊ: ಉತ್ತರ ಮೆಕ್ಸಿಕೊದಲ್ಲಿ ವಿಮಾನವೊಂದು ಅಪಘಾತಕ್ಕೀಡಾಗಿ 97 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ.

ದುರಂಗೊದಿಂದ ಮೆಕ್ಸಿಕೊ ಸಿಟಿಗೆ ತೆರಳುತ್ತಿದ್ದ ಏರೊಮೆಕ್ಸಿಕೊ ಸಂಸ್ಥೆಯ ವಿಮಾನ  ಹಾರಾಟ ಆರಂಭಿಸಿದ ಕೆಲವೇ ಕ್ಷಣದಲ್ಲಿ ನೆಲಕ್ಕಪ್ಪಳಿಸಿದೆ. ವಿಮಾನದಲ್ಲಿ ಸಿಬ್ಬಂದಿ ಸೇರಿ 103 ಮಂದಿ ಪ್ರಯಾಣಿಕರಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ವಿಮಾನ ಹಾರಾಟ ಆರಂಭಿಸಿದಾಗ ಚಂಡಮಾರುತಕ್ಕೆ ಸಿಲುಕಿತ್ತು. ಈ ವೇಳೆ ಪೈಲಟ್‌  ತುರ್ತು ಭೂಸ್ಪರ್ಶ ಮಾಡಲು ಯತ್ನಿಸಿದ್ದಾರೆ. ಆಗ ವಿಮಾನ ನೆಲಕ್ಕಪ್ಪಳಿಸಿ, ಬೆಂಕಿ ಹತ್ತಿಕೊಂಡಿದೆ’ ಎಂದು ವಿಮಾನ ಯಾನ ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.

ಇಬ್ಬರು ಪ್ರಯಾಣಿಕರು ತೀವ್ರ ಗಾಯಗೊಂಡಿದ್ದಾರೆ. ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದಿದ್ದಾರೆ.

‘ವಿಮಾನದಲ್ಲಿದ್ದ ಪ್ರಯಾಣಿಕರು ಪರಸ್ಪರ ಸಹಕರಿಸಿ ಕೂಡಲೆ ವಿಮಾನದಿಂದ ಹೊರಬರುವಲ್ಲಿ ಯಶಸ್ವಿಯಾಗಿದ್ದಾರೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

 

 

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !