ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾಟಾ ಸೈಂಟಿಸ್ಟ್‌ ಆಗಿ ಕಾರ್ಯ ನಿರ್ವಹಿಸುತ್ತಿರುವ 12 ವರ್ಷದ ಬಾಲಕ 

Last Updated 26 ನವೆಂಬರ್ 2019, 7:42 IST
ಅಕ್ಷರ ಗಾತ್ರ

ಹೈದರಾಬಾದ್‌: 7 ತರಗತಿಯಲ್ಲಿಓದುತ್ತಿರುವ 12 ವರ್ಷದ ಬಾಲಕ ಇಲ್ಲಿನ ಸಾಪ್ಟ್‌ವೇರ್‌ ಕಂಪನಿಯೊಂದರಲ್ಲಿ ಡಾಟಾ ಸೈಂಟಿಸ್ಟ್‌ ಹುದ್ದೆಗೆ ನೇಮಕಗೊಂಡಿದ್ದಾನೆ.

ಶ್ರೀ ಚೈತನ್ಯ ಶಾಲೆಯಲ್ಲಿ 7 ತರಗತಿ ಓದುತ್ತಿರುವ ಸಿದ್ದಾರ್ಥ್‌ ಶ್ರೀವಾಸ್ತವ್‌ ಪಿಳೈ ಎಂಬ ಬಾಲಕನನ್ನು 'ಮಾಂಟೇಗ್ನೆ ಸ್ಮಾರ್ಟ್‌ ಬಿಸಿನೆಸ್‌ ಸಲ್ಯೂಶನ್ಸ್‌' ಎಂಬ ಸಾಪ್ಟ್‌ವೇರ್‌ ಕಂಪನಿ ಡಾಟಾ ಸೈಂಟಿಸ್ಟ್‌ ಹುದ್ದೆಗೆ ಆಯ್ಕೆಮಾಡಿಕೊಂಡಿದೆ.

"ನನಗೆ 12 ವರ್ಷ ವಯಸ್ಸಾಗಿದ್ದು, ನಾನು 'ಮಾಂಟೇಗ್ನೆ ಸ್ಮಾರ್ಟ್‌ ಬಿಸಿನೆಸ್‌ ಸಲ್ಯೂಶನ್ಸ್‌'ನಲ್ಲಿ ಡಾಟಾ ಸೈಂಟಿಸ್ಟ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಶ್ರೀ ಚೈತನ್ಯ ಟೆಕ್ನೊ ಸ್ಕೂಲ್‌ನಲ್ಲಿ 7 ತರಗತಿ ಓದುತ್ತಿದ್ದೇನೆ. ಚಿಕ್ಕ ವಯಸ್ಸಿನಲ್ಲಿ ಗೂಗಲ್‌ ಕಂಪನಿಯಲ್ಲಿ ಡೆವಲಪರ್ ಆಗಿ ಕೆಲಸ ನಿರ್ವಹಿಸುತ್ತಿರುವ ತನ್ಮಯ್‌ ಭಕ್ಷಿ ನನಗೆ ಪ್ರೇರಣೆ. ಅವರು ಕೃತಕ ಬುದ್ಧಿಮತ್ತೆಯ (ಆರ್ಟಿಫಿಶಿಲ್‌ ಇಂಟಲಿಜೆನ್ಸ್‌) ಕ್ರಾಂತಿ ಎಷ್ಟು ಸುಂದರವಾಗಿದೆ ಎಂದು ಜಗತ್ತಿಗೆ ಅರ್ಥ ಮಾಡಿಸಿಕೊಡಲು ಶ್ರಮಿಸುತ್ತಿದ್ದಾರೆ. ಅವರ ಪ್ರೇರಣೆಯಿಂದಲೇ ನಾನು ಸಾಪ್ಟ್‌ವೇರ್‌ ಕಂಪನಿಗೆ ಸೇರಿದ್ದೇನೆ."ಎಂದು ಎಎನ್‌ಐಗೆ ತಿಳಿಸಿದ್ದಾನೆ.

ಚಿಕ್ಕ ವಯಸ್ಸಿನಲ್ಲೇ ತನಗೆ ಕೋಡಿಂಗ್‌ ಬಗ್ಗೆ ಆಸಕ್ತಿ ಹುಟ್ಟುವಂತೆ ಮಾಡಿರುವ ತನ್ನ ತಂದೆಗೆ ಧನ್ಯವಾದ ಹೇಳಿರುವ ಸಿದ್ದಾರ್ಥ್‌, ‘ಚಿಕ್ಕ ವಯಸ್ಸಿನಲ್ಲೇ ಕೆಲಸ ಗಿಟ್ಟಿಸಿಕೊಳ್ಳಲು ನನಗೆ ಸಹಾಯ ಮಾಡಿದ ವ್ಯಕ್ತಿ ನನ್ನ ತಂದೆ. ಅವರು ನನಗೆ ಹಲವು ಜೀವನ ಚರಿತ್ರೆ ತೋರಿಸಿದ್ದಾರೆ. ಅದರ ಜೊತೆಗೆ ಕೋಡಿಂಗ್‌ ಕಲಿಸಿದ್ದಾರೆ. ನಾನು ಇವತ್ತು ಏನಾಗಿದ್ದೇನೋ ಅದಕ್ಕೆ ನನ್ನ ತಂದೆಯೇ ಕಾರಣ,’ ಎಂದು ಹೇಳಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT