ಶಬರಿಮಲೆ| ಸರ್ಕಾರದಿಂದ ಮಹಿಳಾ ವಿರೋಧಿ ನಡೆ: ತೃಪ್ತಿ ದೇಸಾಯಿ ಆರೋಪ

ಶಬರಿಮಲೆ: ಇಲ್ಲಿನ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಭದ್ರತೆ ಒದಗಿಸದ ಕೇರಳ ಸರ್ಕಾರದ ನಡೆಯನ್ನು ಸಾಮಾಜಿಕ ಕಾರ್ಯಕರ್ತೆ ತೃಪ್ತಿ ದೇಸಾಯಿ ಟೀಕಿಸಿದ್ದಾರೆ.
‘ಶಬರಿಮಲೆ ದೇಗುಲ ಪ್ರವೇಶಿಸುವ ಮಹಿಳೆಯರಿಗೆ ಭದ್ರತೆ ಒದಗಿಸುವುದಿಲ್ಲ ಎಂದು ಸರ್ಕಾರ ನಿನ್ನೆ ಹೇಳಿತ್ತು. ಇಂದು ದೇಗುಲಕ್ಕೆ ತೆರಳುತ್ತಿದ್ದ ಸ್ತ್ರೀಯರನ್ನು ತಡೆಯಲಾಗಿದೆ. ಸರ್ಕಾವು ಮಹಿಳಾ ವಿರೋಧಿ ಧೋರಣೆ ಅನುಸರಿಸುತ್ತಿದೆ’ ಎಂದು ಅವರು ಆರೋಪಿಸಿದ್ದಾರೆ.
ಶಬರಿಮಲೆ: ಅಯ್ಯಪ್ಪ ದೇಗುಲದ ಬಾಗಿಲು ತೆರೆದ ಅರ್ಚಕರು, ಮಹಿಳೆಯರಿಗಿಲ್ಲ ಪ್ರವೇಶ
ಕಳೆದ ವರ್ಷ ಶಬರಿಮಲೆ ದೇಗುಲ ಪ್ರವೇಶಿಸಿದ್ದ ಕೋಯಿಕ್ಕೋಡ್ನ ಕೊಯಿಲಾಂಡಿ ನಿವಾಸಿ ಬಿಂದು ಮತ್ತು ಮಲಪ್ಪುರಂನ ಅಂಗಡಿಪ್ಪುರಂ ನಿವಾಸಿ ಕನಕದುರ್ಗಾ ಅವರಿಗೆ ಸರ್ಕಾರ ಭದ್ರತೆ ಒದಗಿಸಿತ್ತು. ಆದರೆ, ಈ ವರ್ಷ ಭದ್ರತೆ ಒದಗಿಸಲಾಗದು ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಸುಪ್ರೀಂ ಕೋರ್ಟ್ ಅಂತಿಮ ತೀರ್ಪು ಬರುವವರೆಗೂ ಮಹಿಳೆಯರಿಗೆ ಪ್ರವೇಶ ನೀಡದಿರಲು ಕೇರಳ ಸರ್ಕಾರ ತೀರ್ಮಾನಿಸಿದೆ.
ಈ ಮಧ್ಯೆ, ಎರಡು ತಿಂಗಳ ಅವಧಿಯ ಶಬರಿಮಲೆ ತೀರ್ಥಯಾತ್ರೆ ಋತು ಶನಿವಾರ ಆರಂಭವಾಗಿದ್ದು, ಸಂಜೆ ಐದು ಗಂಟೆಗೆ ಅಯ್ಯಪ್ಪ ದೇಗುಲದ ಗರ್ಭಗುಡಿಯ ಬಾಗಿಲು ತೆರೆಯಲಾಗಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.