ಅಮೇಠಿ ಬಳಿಕ ರಾಯಬರೇಲಿ ಮೇಲೆ ಬಿಜೆಪಿ ಕಣ್ಣು

ಬುಧವಾರ, ಮಾರ್ಚ್ 20, 2019
25 °C

ಅಮೇಠಿ ಬಳಿಕ ರಾಯಬರೇಲಿ ಮೇಲೆ ಬಿಜೆಪಿ ಕಣ್ಣು

Published:
Updated:
Prajavani

ಲಖನೌ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಕ್ಷೇತ್ರ ಅಮೇಠಿಯಲ್ಲಿ ಭರ್ಜರಿ ಚುನಾವಣಾ ಪ್ರಚಾರ ನಡೆಸಿದ ಬಿಜೆಪಿ ಇದೀಗ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರು ಪ್ರತಿನಿಧಿಸುತ್ತಿರುವ ರಾಯಬರೇಲಿ ಮೇಲೆ ಕಣ್ಣಿಟ್ಟಿದೆ. 

ಈ ಬಾರಿಯೂ ಸೋನಿಯಾ ಅವರೇ ರಾಯಬರೇಲಿಯಿಂದ ಸ್ಪರ್ಧಿಸುವ ಸಾಧ್ಯತೆಯಿದ್ದು, ಅವರ ಎದುರಾಳಿಯಾಗಿ ಸ್ಥಳೀಯ ಪ್ರಬಲ ಅಭ್ಯರ್ಥಿಗೆ ಪಕ್ಷ ಹುಡುಕಾಟ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಪ್ರಬಲ ಠಾಕೂರ್ ಸಮುದಾಯದ ಕೆಲವು ಮುಖಂಡರನ್ನು ಬಿಜೆಪಿ ಸಂಪರ್ಕಿಸಿದ್ದು, ಸೋನಿಯಾ ವಿರುದ್ಧ ಸ್ಪರ್ಧಿಸುವಂತೆ ಮನವೊಲಿಸುತ್ತಿದೆ. ಕೆಲ ತಿಂಗಳ ಹಿಂದೆ ಬಿಜೆಪಿ ಸೇರ್ಪಡೆಯಾಗಿರುವ ಕಾಂಗ್ರೆಸ್‌ನ ಮಾಜಿ ಶಾಸಕ ದಿನೇಶ್ ಪ್ರತಾಪ್ ಸಿಂಗ್ ಅವರು ಸಂಭಾವ್ಯರ ಪಟ್ಟಿಯಲ್ಲಿದ್ದಾರೆ.

‘ಸೋನಿಯಾ ಅವರಿಗೆ ಸ್ಪರ್ಧೆ ಒಡ್ಡಬಲ್ಲ ಅಭ್ಯರ್ಥಿ ಇನ್ನೂ ಸಿಕ್ಕಿಲ್ಲ. ಆದರೆ ರಾಯಬರೇಲಿಯಲ್ಲಿ ನಮ್ಮ ಸಂಘಟನೆ ಪ್ರಬಲವಾಗಿದ್ದು, ಬದ್ಧತೆಯಿರುವ ಕಾರ್ಯಕರ್ತರು ಇದ್ದಾರೆ. ಈ ಬಾರಿ ಪ್ರಬಲ ಸ್ಪರ್ಧೆ ನೀಡುವುದು ಖಚಿತ’ ಎಂದು ಬಿಜೆಪಿ ಮುಖಂಡರೊಬ್ಬರು ಹೇಳಿದ್ದಾರೆ.

2014ರಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿದ್ದ ಅಜಯ್ ಅಗರ್ವಾಲ್ ವಿರುದ್ಧ ಸೋನಿಯಾ ದಾಖಲೆಯ 3.53 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದರು. 

Tags: 

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !