ಅಂತಿಮ ನಮನಕ್ಕೆ ಬಂದ ಸ್ವಾಮಿ ಅಗ್ನಿವೇಶ್‌ ಮೇಲೆ ಹಲ್ಲೆ

7

ಅಂತಿಮ ನಮನಕ್ಕೆ ಬಂದ ಸ್ವಾಮಿ ಅಗ್ನಿವೇಶ್‌ ಮೇಲೆ ಹಲ್ಲೆ

Published:
Updated:

ನವದೆಹಲಿ: ವಾಜಪೇಯಿ ಅವರಿಗೆ ಅಂತಿಮ ನಮನ ಸಲ್ಲಿಸಲು ಬಿಜೆಪಿ ಕೇಂದ್ರ ಕಚೇರಿಗೆ ಬಂದ ಸಾಮಾಜಿಕ ಕಾರ್ಯಕರ್ತರ ಸ್ವಾಮಿ ಅಗ್ನಿವೇಶ್‌ (79) ಅವರನ್ನು ಎಳೆದಾಡಿ, ಅವರ ಮೇಲೆ ಹಲ್ಲೆ ನಡೆಸಲಾಗಿದೆ. ತಮ್ಮ ಮೇಲೆ ಹಲ್ಲೆ ನಡೆಸಿದವರು ಬಿಜೆಪಿ ಕಾರ್ಯಕರ್ತರು ಎಂದು ಅಗ್ನಿವೇಶ್‌ ಆರೋಪಿಸಿದ್ದಾರೆ.

ಈ ಹಲ್ಲೆಯ ದೃಶ್ಯಗಳಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 

ಜನರ ಗುಂಪು ಅವರನ್ನು ಬೆನ್ನಟ್ಟಿದೆ. ಅಗ್ನಿವೇಶ್‌ ಅವರಿಗೆ ಹೊಡೆಯದಂತೆ ವ್ಯಕ್ತಿಯೊಬ್ಬರು ತಡೆದಿದ್ದಾರೆ. ಪೊಲೀಸರು ಮಧ್ಯ‍ಪ್ರವೇಶಿಸಿ ಅಗ್ನಿವೇಶ್‌ ಅವರನ್ನು ಸುರಕ್ಷಿತವಾಗಿ ಕರೆದೊಯ್ದರು. 

ಒಂದು ಹಂತದಲ್ಲಿ ವ್ಯಕ್ತಿಯೊಬ್ಬರು ಅವರನ್ನು ತಳ್ಳಿದರು. ಮಹಿಳೆಯೊಬ್ಬರು ಕೈಗೆ ಚಪ್ಪಲಿ ತೆಗೆದುಕೊಂಡು ಹೊಡೆಯಲು ಮುಂದಾದರು. ಆದರೆ ಅವರಿಗೆ ಹೊಡೆಯಲು ಸಾಧ್ಯವಾಗಲಿಲ್ಲ. ಬಳಿಕವೂ ಆ ಮಹಿಳೆ ಅಗ್ನಿವೇಶ್‌ ಅವರನ್ನು ಬೆನ್ನಟ್ಟಿಕೊಂಡು ಹೋದರು. 

‘ಬಿಜೆಪಿ ಕಚೇರಿಯತ್ತ ನಡೆದು ಹೋಗುತ್ತಿದ್ದಾಗ 20–30 ಬಿಜೆಪಿ ಕಾರ್ಯಕರ್ತರ ಗುಂಪು ಸುತ್ತುವರಿದು ಹಲ್ಲೆ ನಡೆಸಿದೆ. ನನ್ನ ಪೇಟ ಕೆಳಗೆ ಬಿತ್ತು. ಅವರು ನನ್ನನ್ನು ದೇಶದ್ರೋಹಿ ಎಂದು ಕರೆದರು’ ಎಂದು ಅಗ್ನಿವೇಶ್‌ ಹೇಳಿದ್ದಾರೆ. 

‘ಅವರು ನನ್ನನ್ನು ವಿಷ್ಣುದಿಗಂಬರ ರಸ್ತೆಯತ್ತ ತಳ್ಳಿದರು. ಕೈಯಲ್ಲಿ ಚಪ್ಪಲಿ ಹಿಡಿದಿದ್ದ ಕೆಲವು ಮಹಿಳೆಯರೂ ಇದ್ದರು. ಅವರೆಲ್ಲರೂ ನನ್ನನ್ನು ಅವಾಚ್ಯವಾಗಿ ಬಯ್ದರು. ಕೆಲವು ಪೊಲೀಸರು ಅಲ್ಲಿ ಇದ್ದರು’ ಎಂದು ಅಗ್ನಿವೇಶ್‌ ತಿಳಿಸಿದ್ದಾರೆ. 

‘ಬಿಜೆಪಿ ಕಚೇರಿಗೆ ಭೇಟಿ ನೀಡುವ ವಿಚಾರವನ್ನು ಕೇಂದ್ರ ಸಚಿವ ಹರ್ಷವರ್ಧನ್‌ ವರಿಗೆ ಮೊದಲೇ ತಿಳಿಸಿದ್ದೆ. ಹಲ್ಲೆಗೆ ಸಂಬಂಧಿಸಿ ಪೊಲೀಸರಿಗೆ ದೂರು ನೀಡುತ್ತೇನೆ. ಈತನಕ ಪೊಲೀಸರು ನನ್ನನ್ನು ಸಂಪರ್ಕಿಸಿಲ್ಲ ’ ಎಂದು ಅಗ್ನಿವೇಶ್‌ ಹೇಳಿದ್ದಾರೆ. 

ಕಳೆದ ತಿಂಗಳು ಅಗ್ನಿವೇಶ್‌ ಅವರು ಜಾರ್ಖಂಡ್‌ನ ಪಕುರ್‌ ಎಂಬಲ್ಲಿಗೆ ಭೇಟಿ ಕೊಟ್ಟಾಗ ಅವರ ಮೇಲೆ ಹಲ್ಲೆ ನಡೆದಿತ್ತು. ಭಾರತೀಯ ಜನತಾ ಯುವ ಮೋರ್ಚಾ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿತ್ತು. 

 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 2

  Sad
 • 0

  Frustrated
 • 6

  Angry

Comments:

0 comments

Write the first review for this !