ಏರ್ ಇಂಡಿಯಾ: ‘ಜೈಹಿಂದ್’ ಕಡ್ಡಾಯ

ನವದೆಹಲಿ: ಏರ್ ಇಂಡಿಯಾ ವಿಮಾನಗಳ ಸಿಬ್ಬಂದಿಯು ಇನ್ನುಮುಂದೆ ಪ್ರಕಟಣೆ ನೀಡುವ ವೇಳೆ ‘ಜೈ ಹಿಂದ್’ ಎಂದು ಕೂಗಬೇಕು.
–ಹೀಗೆಂದು ಏರ್ ಇಂಡಿಯಾದ ಕಾರ್ಯಾಚರಣೆ ವಿಭಾಗದ ನಿರ್ದೇಶಕ ಅಮಿತಾಭ್ ಸಿಂಗ್ ಅವರು ಸೋಮವಾರ ಸುತ್ತೋಲೆ ಹೊರಡಿಸಿದ್ದಾರೆ. ತಕ್ಷಣದಿಂದಲೇ ಇದು ಜಾರಿಗೆ ಬಂದಿದೆ.
ಪ್ರತಿ ಬಾರಿ ಪ್ರಕಟಣೆ ನೀಡಿದ ಬಳಿಕ ಕೊನೆಯಲ್ಲಿ ಜೈ ಹಿಂದ್ ಎಂದು ಉತ್ಸಾಹದಿಂದ ಹಾಗೂ ಕಡ್ಡಾಯವಾಗಿ ಹೇಳಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
2016ರಲ್ಲಿ ಏರ್ ಇಂಡಿಯಾ ಮುಖ್ಯಸ್ಥರಾಗಿದ್ದ ಅಶ್ವನಿ ಲೋಹಾನಿ ಅವರು ಪೈಲಟ್‌ಗಳಿಗೆ ಇಂತಹದೇ ಸೂಚನೆ ನೀಡಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.