ಏರ್ ಇಂಡಿಯಾ: ಮುಂದಿನ ತಿಂಗಳಿಂದ ಹೊಸ ವಿಮಾನಗಳ ಸಂಚಾರ

ಬುಧವಾರ, ಜೂನ್ 19, 2019
31 °C

ಏರ್ ಇಂಡಿಯಾ: ಮುಂದಿನ ತಿಂಗಳಿಂದ ಹೊಸ ವಿಮಾನಗಳ ಸಂಚಾರ

Published:
Updated:

ನವದೆಹಲಿ: ಮುಂದಿನ ತಿಂಗಳಿನಿಂದ ದೇಶದೊಳಗೆ ಮತ್ತು ಹೊರಗೆ ಹೊಸ ವಿಮಾನಗಳ ಸಂಚಾರ ಆರಂಭಿಸುವುದಾಗಿ ಏರ್ ಇಂಡಿಯಾ ಬುಧವಾರ ಘೋಷಿಸಿದೆ.

ಬೇಸಿಗೆ ರಜೆ ಹಿನ್ನೆಲೆಯಲ್ಲಿ ಪ್ರಯಾಣಿಕರ ಒತ್ತಡ ಹೆಚ್ಚಿದ್ದು, ಗ್ರಾಹಕರ ಬೇಡಿಕೆ ಮೇರೆಗೆ ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರ್ಗಗಳಲ್ಲಿ ಹೊಸ ವಿಮಾನಗಳ ಸಂಚಾರ ಆರಂಭಿಸಲು ನಿರ್ಧರಿಸಲಾಗಿದೆ ಎಂದು ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಹೇಳಿದೆ.

ಜೂನ್ 1ರಿಂದ ಮುಂಬೈ-ದುಬೈ-ಮುಂಬೈ ಮಾರ್ಗದಲ್ಲಿ ವಾರಕ್ಕೆ ಹೆಚ್ಚುವರಿ 3,500 ಆಸನ ವ್ಯವಸ್ಥೆ ಹೊಂದಿರುವ ವಿಮಾನಗಳು ಸಂಚರಿಸಲಿವೆ. ಜೂನ್ 2ರಿಂದ ದೆಹಲಿ-ದುಬೈ-ದೆಹಲಿ ಮಾರ್ಗದಲ್ಲಿ ವಾರಕ್ಕೆ ಇಷ್ಟೇ ಆಸನಗಳ ವ್ಯವಸ್ಥೆ ಇರುವ ವಿಮಾನಗಳು ಸಂಚರಿಸಲಿವೆ.

ಪ್ರೋತ್ಸಾಹಕ ದರದ ರೂಪದಲ್ಲಿ ಒಂದು ಮಾರ್ಗಕ್ಕೆ (ಒನ್ ವೇ) ಎಕಾನಮಿ ದರ್ಜೆಗೆ ಎಲ್ಲ ತೆರಿಗೆ ಸಹಿತ ₹7,777 ದರ ನಿಗದಿ ಮಾಡಲಾಗಿದೆ. ದೆಹಲಿ ಮತ್ತು ಮುಂಬೈನಿಂದ ದುಬೈ ಮಾರ್ಗಕ್ಕೆ ಇದು ಅನ್ವಯವಾಗಲಿದ್ದು, ಜುಲೈ 31ರೊಳಗೆ ಪ್ರಯಾಣ ಮಾಡಬೇಕು ಎಂದು ಏರ್ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ.

ದೇಶೀಯವಾಗಿ ಭೋಪಾಲ್-ಪುಣೆ-ಭೋಪಾಲ್ ಮಾರ್ಗದಲ್ಲಿ ಮತ್ತು ವಾರಾಣಸಿ-ಚೆನ್ನೈ-ವಾರಾಣಸಿ ಮಾರ್ಗದಲ್ಲಿ ಜೂನ್ 5 ರಿಂದ ಹೊಸ ವಿಮಾನಗಳು ಸಂಚರಿಸಲಿವೆ.

ದೆಹಲಿ- ಭೋಪಾಲ್ ಮಾರ್ಗದಲ್ಲಿ ವಾರಕ್ಕೆ ಸದ್ಯ 14 ವಿಮಾನಗಳು ಸಂಚರಿಸುತ್ತಿದ್ದು, ಈ ಸಂಖ್ಯೆಯನ್ನು 20ಕ್ಕೆ ಏರಿಸಲಾಗಿದೆ. ಅದೇ ರೀತಿ, ದೆಹಲಿ-ರಾಯಪುರ-ದೆಹಲಿ ಮಾರ್ಗದಲ್ಲಿ ಸದ್ಯ ವಾರಕ್ಕೆ 7 ವಿಮಾನಗಳು ಸಂಚರಿಸುತ್ತಿದ್ದು, ಈ ಸಂಖ್ಯೆಯನ್ನು 14 ಕ್ಕೆ ಏರಿಸಲಾಗಿದೆ.

ದೆಹಲಿ-ಬೆಂಗಳೂರು-ದೆಹಲಿ, ದೆಹಲಿ-ಅಮೃತಸರ, ದೆಹಲಿ-ಅಹಮದಾಬಾದ್-ಚೆನ್ನೈ ಮತ್ತು ಚೆನ್ನೈ ಹಾಗೂ ಕೋಲ್ಕತ್ತ, ದೆಹಲಿ-ವಡೋದರ, ದೆಹಲಿ-ವಿಶಾಖಪಟ್ಟಣದ ನಡುವೆ ಸಂಚರಿಸುವ ವಿಮಾನಗಳ ಸಂಖ್ಯೆಯನ್ನೂ ಹೆಚ್ಚಿಸಲಾಗುತ್ತದೆ ಎಂದು ಏರ್ ಇಂಡಿಯಾ ತಿಳಿಸಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !