ಗುರುವಾರ , ನವೆಂಬರ್ 14, 2019
26 °C
ರಫೇಲ್ ಒಪ್ಪಂದದ ಸಮಾಲೋಚನಾ ತಂಡದ ಅಧ್ಯಕ್ಷರಾಗಿದ್ದ ಭದೌರಿಯಾ

ವಾಯುಪಡೆ ಹೊಸ ಮುಖ್ಯಸ್ಥರಾಗಿ ಆರ್‌ಕೆಎಸ್ ಭದೌರಿಯಾ ಅಧಿಕಾರ ಸ್ವೀಕಾರ

Published:
Updated:

ನವದೆಹಲಿ: ಭಾರತೀಯ ವಾಯುಪಡೆಯ ನೂತನ ಮುಖ್ಯಸ್ಥರಾಗಿ ಏರ್ ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ (ಆರ್‌ಕೆಎಸ್ ಭದೌರಿಯಾ) ಸೋಮವಾರ ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಬಿ.ಎಸ್.ಧನೋವಾ ಅಧಿಕಾರ ಹಸ್ತಾಂತರಿಸಿದರು.

ಧನೋವಾ ಇಂದು (ಸೆಪ್ಟೆಂಬರ್ 30) ನಿವೃತ್ತರಾಗುತ್ತಿರುವ ಹಿನ್ನೆಲೆಯಲ್ಲಿ ಆರ್‌ಕೆಎಸ್ ಭದೌರಿಯಾ ಅವರನ್ನು ನೂತನ ಮುಖ್ಯಸ್ಥರನ್ನಾಗಿ ಕೇಂದ್ರ ಸರ್ಕಾರ ಸೆಪ್ಟೆಂಬರ್ 19ರಂದು ಘೋಷಣೆ ಮಾಡಿತ್ತು.

‘ಸದ್ಯ ವಾಯುಪಡೆಯ ಉಪ ಮುಖ್ಯಸ್ಥರಾಗಿರುವ ಆರ್‌ಕೆಎಸ್ ಭದೌರಿಯಾ ಅವರನ್ನು ನೂತನ ಮುಖ್ಯಸ್ಥರನ್ನಾಗಿ ನೇಮಕ ಮಾಡಲು ನಿರ್ಧರಿಸಲಾಗಿದೆ’ ಎಂದು ರಕ್ಷಣಾ ಸಚಿವಾಲಯದ ಪ್ರಧಾನ ವಕ್ತಾರರು ಟ್ವೀಟ್ ಮಾಡಿದ್ದರು.

ಬೆಂಗಳೂರಿನಲ್ಲಿರುವ ‘ವಾಯುಪಡೆ ತರಬೇತಿ ಕಮಾಂಡ್‌’ನ ಮುಖ್ಯಸ್ಥರಾಗಿದ್ದ ಭದೌರಿಯಾ, ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಸಂಬಂಧಿಸಿ ಭಾರತದ ಸಮಾಲೋಚನಾ ತಂಡದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಕಮಾಂಡೆಂಟ್, ಸೆಂಟ್ರಲ್ ಏರ್ ಕಮಾಂಡ್‌ನ ಸೀನಿಯರ್ ಏರ್ ಸ್ಟಾಫ್, ಸೌದರ್ನ್ ಏರ್‌ ಕಮಾಂಡ್‌ನ ಏರ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ ಆಗಿ ಕಾರ್ಯನಿರ್ವಹಿಸಿದ್ದಾರೆ.

ದನೋವಾ ಅವರೊಂದಿಗೆ ಭದೌರಿಯಾ ಅವರೂ ಇಂದೇ ನಿವೃತ್ತಿಯಾಗಬೇಕಿತ್ತು. ಆದರೆ ವಾಯುಪಡೆಯ ಮುಂದಿನ ಮುಖ್ಯಸ್ಥರಾಗಿ ಬಡ್ತಿ ನೀಡಿರುವುದರಿಂದ ಇನ್ನೂ ಎರಡು ವರ್ಷ ಸೇವೆ ಸಲ್ಲಿಸಲು ಅವರಿಗೆ ಅವಕಾಶ ದೊರೆತಿದೆ.

ಬದೌರಿಯಾ ಅವರಿಗೆ 26 ರೀತಿಯ ಯುದ್ಧ ವಿಮಾನ ಮತ್ತು ಸರಕು ಸಾಗಣೆ ವಿಮಾನಗಳಲ್ಲಿ ಒಟ್ಟು 4,250 ಗಂಟೆ ಹಾರಾಟದ ಅನುಭವವಿದೆ.

ಪ್ರತಿಕ್ರಿಯಿಸಿ (+)