ದೆಹಲಿಗೆ ಅಭಿನಂದನ್: ಏರ್ ವೈಸ್ ಮಾರ್ಷಲ್

ಸೋಮವಾರ, ಮಾರ್ಚ್ 25, 2019
28 °C
ಅಟ್ಟಾರಿಯಲ್ಲಿ ಸುದ್ದಿಗೋಷ್ಠಿ

ದೆಹಲಿಗೆ ಅಭಿನಂದನ್: ಏರ್ ವೈಸ್ ಮಾರ್ಷಲ್

Published:
Updated:

ನವದೆಹಲಿ: ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಅವರನ್ನು ಪಾಕಿಸ್ತಾನ ನಮಗೆ ಹಸ್ತಾಂತರಿಸಿದೆ ಎಂದು ಏರ್ ವೈಸ್ ಮಾರ್ಷಲ್ ಆರ್‌.ಜಿ.ಕೆ.ಕಪೂರ್ ತಿಳಿಸಿದರು.

ಇದನ್ನೂ ಓದಿ: ತಾಯ್ನೆಲದಲ್ಲಿ ವಿಂಗ್ ಕಮಾಂಡರ್ ಅಭಿನಂದನ್: ಭಾವುಕ ಕ್ಷಣ, ಎಲ್ಲೆಲ್ಲೂ ಸಂಭ್ರಮ​

ಹಸ್ತಾಂತರವಾದ ಬಳಿಕ ಅಟ್ಟಾರಿ ಗಡಿಯ ಬಳಿ ಸುದ್ದಿಗೋಷ್ಠಿ ನಡೆಸಿದ ಅವರು, ಅಭಿನಂದನ್ ಅವರನ್ನು ಸಂಪೂರ್ಣ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುವುದು. ಪ್ಯಾರಾಚೂಟ್‌ ಮೂಲಕ ವಿಮಾನದಿಂದ ಜಿಗಿದ ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸುವ ಅಗತ್ಯವಿದೆ ಎಂದರು.

ನಿರ್ಮಲಾ ಸ್ವಾಗತ: ಅಭಿನಂದನ್ ಭಾರತದ ಭೂಪ್ರದೇಶಕ್ಕೆ ಕಾಲಿಟ್ಟ ಬೆನ್ನಲ್ಲೇ ಆ ಕುರಿತು ರಕ್ಷಣಾ ಸಚಿವೆ ನಿರ್ಮಾಲಾ ಸೀತಾರಾಮನ್ ಹರ್ಷ ವ್ಯಕ್ತಪಡಿಸಿದ್ದು, ‘ಜೈ ಹಿಂದ್’ ಎಂದು ಟ್ವೀಟ್ ಮಾಡಿದ್ದಾರೆ.

 

‘ವಿಂಗ್ ಕಮಾಂಡರ್‌ ಅಭಿನಂದನ್‌ ನಿಮ್ಮ ಬಗ್ಗೆ ಹೆಮ್ಮೆ ಇದೆ. ನಿಮ್ಮ ಶೌರ್ಯ, ಸಾಹಸವನ್ನು ಈಡೀ ದೇಶ ಕೊಂಡಾಡುತ್ತಿದೆ. ನೀವು ನಮ್ಮ ಯುವಜನತೆಗೆ ಸ್ಫೂರ್ತಿ, ನಿಮಗೊಂದು ಸೆಲ್ಯೂಟ್‌, ವಂದೇ ಮಾತರಂ’ ಎಂದು ಮತ್ತೊಂದು ಟ್ವೀಟ್‌ನಲ್ಲಿ ಅಭಿನಂದನೆ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 17

  Happy
 • 1

  Amused
 • 1

  Sad
 • 1

  Frustrated
 • 0

  Angry

Comments:

0 comments

Write the first review for this !