ಗುರುವಾರ , ಏಪ್ರಿಲ್ 15, 2021
21 °C
8 ಸಾವಿರ ಯಾತ್ರಾರ್ಥಿಗಳ ತಂಡ

ಜಮ್ಮುವಿನಿಂದ ಅಮರನಾಥ ಯಾತ್ರೆ ಆರಂಭ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಜಮ್ಮು: ಅಮರನಾಥ ಯಾತ್ರೆ ಇಲ್ಲಿಂದ ಭಾನುವಾರ ಮತ್ತೆ ಆರಂಭವಾಯಿತು. ಕಾಶ್ಮೀರ ಕಣಿವೆಯಲ್ಲಿ ‘ಹುತಾತ್ಮರ ದಿನ’ದಂದು ಪ್ರತ್ಯೇಕತಾವಾದಿಗಳ ಬೆಂಬಲದಲ್ಲಿ ಮುಷ್ಕರಕ್ಕೆ ಕರೆ ನೀಡಿದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಯಾತ್ರೆಯನ್ನು ಶನಿವಾರ ರದ್ದುಪಡಿಸಲಾಗಿತ್ತು.

ಜೂನ್‌ 28 ರಿಂದ ಯಾತ್ರೆ ಆರಂಭವಾದಾಗಿನಿಂದ ಈವರೆಗೆ ಐದು ಬಾರಿ ರದ್ದುಪಡಿಸಲಾಗಿದೆ. ಹಿಜ್ಬುಲ್‌ ಮುಜಾಹಿದ್ದಿನ್ ಉಗ್ರ ಬುರ್ಹಾನ್‌ ವಾನಿ ಹತ್ಯೆಯ ಮೂರನೇ ವರ್ಷಾಚರಣೆ ನಡೆಯಬಹುದು ಎಂಬ ಕಾರಣದಿಂದ ಜುಲೈ 8 ರಂದು ಯಾತ್ರೆಯನ್ನು ರದ್ದುಪಡಿಸಲಾಗಿತ್ತು.

ಭಾನುವಾರ ಹೊರಟಿರುವ ಯಾತ್ರೆಯಲ್ಲಿ 7993 ಮಂದಿ ಇದ್ದಾರೆ. ಇದು ಈವರೆಗಿನ ಅತಿ ದೊಡ್ಡ ಸಂಖ್ಯೆಯಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು