ಬಾಲ್‌ಟಾಲ್‌ ಮಾರ್ಗದಲ್ಲಿ ಅಮರನಾಥ ಯಾತ್ರೆ ಸ್ಥಗಿತ

7
ಪ್ರತಿಕೂಲ ಹವಾಮಾನ ಪರಿಣಾಮ

ಬಾಲ್‌ಟಾಲ್‌ ಮಾರ್ಗದಲ್ಲಿ ಅಮರನಾಥ ಯಾತ್ರೆ ಸ್ಥಗಿತ

Published:
Updated:

ಶ್ರೀನಗರ : ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆ ಹಾಗೂ ಮಾರ್ಗಮಧ್ಯೆ ಹಲವು ಕಡೆ ಭೂಕುಸಿತ ಸಂಭವಿಸಿದ್ದರಿಂದ ಬಾಲ್‌ಟಾಲ್‌ ಮುಖಾಂತರ ಸಾಗುವ ಅಮರನಾಥ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ.

‘ಭೂಕುಸಿತದಿಂದ ಕಾಳಿಮಾತ ದಾರಿಯೂ ಸಂಪೂರ್ಣ ಹದಗೆಟ್ಟಿದ್ದು, ಈ ಕಾರಣದಿಂದ ಯಾತ್ರೆಯನ್ನು ಒತ್ತಾಯಪೂರ್ವಕವಾಗಿ ಸ್ಥಗಿತಗೊಳಿಸಲಾಗಿದೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಬಾಲ್‌ಟಾಲ್‌ ಮಾರ್ಗವು ಅತ್ಯಂತ ಕಡಿದಾದ ಇಳಿಜಾರುಗಳನ್ನು ಹೊಂದಿರುವ ಚಾರಣದ ಹಾದಿಯಾಗಿದ್ದು, ಪುನರ್‌ ನಿರ್ಮಾಣ ಕಾರ್ಯ ಆರಂಭಗೊಂಡಿದೆ’ ಎಂದು ತಿಳಿಸಿದರು.

ಉಳಿದಂತೆ, ‘ಪಹಲ್‌ಗಾಮ್‌ ಮಾರ್ಗದಲ್ಲಿ ಯಾತ್ರೆ ಎಂದಿನಂತೆ ಮುಂದುವರಿಯಲಿದೆ’ ಎಂದು ಅಮರನಾಥ ದೇವಾಲಯ ಮಂಡಳಿಯ (ಎಸ್‌ಎಎಸ್‌ಬಿ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !