ಶುಕ್ರವಾರ, ನವೆಂಬರ್ 22, 2019
26 °C

ಬಿಹಾರದಲ್ಲಿ ಜೆಡಿಯು- ಬಿಜೆಪಿ ಮೈತ್ರಿ 'ಅಚಲ': ಅಮಿತ್ ಶಾ

Published:
Updated:
Amit Shah

ನವದೆಹಲಿ: ಬಿಜೆಪಿ ಮತ್ತು ಜೆಡಿಯು ಮೈತ್ರಿ ಅಚಲವಾಗಿದೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿಯೇ ಮುಂದಿನ ವರ್ಷ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ನ್ಯೂಸ್ 18 ಸುದ್ದಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅಮಿತ್ ಶಾ, ನಮ್ಮ  ಮೈತ್ರಿ ದೃಢವಾಗಿದೆ.   ಬಿಹಾರದಲ್ಲಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಎನ್‌ಡಿಎ ಚುನಾವಣೆ ಎದುರಿಸಲಿದೆ. ರಾಷ್ಟ್ರಮಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿಯವರೇ ನೇತೃತ್ವ ಮುಂದುವರಿಸಲಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ: 370ನೇ ವಿಧಿ ರದ್ದು ಮಾಡಲು ಸಾಧ್ಯವಾಗಿದ್ದು 56 ಇಂಚು ಎದೆಯ ವ್ಯಕ್ತಿಗೆ ಮಾತ್ರ: ಶಾ

ಪಟನಾದಲ್ಲಿ ಬಿಜೆಪಿ ನಡುವೆ ಭಿನ್ನಮತದ ಕೂಗು ಎದ್ದಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಶಾ, ಭಿನ್ನಮತ ಒಳ್ಳೆಯದೇ. ಅದು ಮನಸ್ಥಿತಿಗಳ ನಡುವಿನ ಭಿನ್ನತೆ ಎಂದು ಅರ್ಥೈಸಿಕೊಳ್ಳಬೇಡಿ ಎಂದಿದ್ದಾರೆ.   

ಬಿಹಾರದಲ್ಲಿ ಎನ್‌ಡಿಎಗೆ ನಿತೀಶ್  ಕುಮಾರ್ ನೇತೃತ್ವ ವಹಿಸುತ್ತಿರುವ ಬಗ್ಗೆ ಬಿಜೆಪಿಯಲ್ಲಿ ಭಿನ್ನಮತದ ಕೂಗು ಎದ್ದಿತ್ತು. ಕಳೆದ ವಾರ  ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಮತ್ತುಇತರ ನಾಲ್ಕು ಬಿಜೆಪಿ ಸದಸ್ಯರು ನಿತೀಶ್ ಕುಮಾರ್ ಭಾಗವಹಿಸಿದ್ದ  ರಾವಣ ದಹನ ಕಾರ್ಯಕ್ರಮಕ್ಕೆ ಹಾಜರಾಗಲಿಲ್ಲ.
 

ಪ್ರತಿಕ್ರಿಯಿಸಿ (+)