ಬುಧವಾರ, ನವೆಂಬರ್ 20, 2019
25 °C

ಅನುಭವಿ, ಸಮರ್ಥ ಸಂಘಟಕ: ಅಮಿತ್‌ ಶಾ ಹುಟ್ಟುಹಬ್ಬಕ್ಕೆ ಮೋದಿ ಗುಣಗಾನ 

Published:
Updated:

ನವದೆಹಲಿ: ಬಿಜೆಪಿ ರಾಷ್ಟ್ರ ಘಟಕದ ಅಧ್ಯಕ್ಷ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಇಂದು 55ನೇ ಹುಟ್ಟು ಹಬ್ಬದ ಸಂಭ್ರಮ. 

ಕೇಂದ್ರದಲ್ಲಿ ಅಧಿಕಾರದಲ್ಲಿರುವ ದೇಶದ ಹಲವು ರಾಜ್ಯಗಳ ಆಡಳಿತ ಚುಕ್ಕಾಣಿ ಹಿಡಿದಿರುವ ಪಕ್ಷದ ರಾಷ್ಟ್ರಧ್ಯಕ್ಷನಿಗೆ ಇಂದು ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. 

ಪ್ರಧಾನಿ ಮೋದಿಯಿಂದ ಹಿಡಿದು ಹಲವು ಗಣ್ಯರು ಶುಭ ಕೋರಿದ್ದಾರೆ. ಅಭಿಮಾನಿಗಳು, ಪಕ್ಷದ ಕಾರ್ಯಕರ್ತರಿಂದಲೂ ಶುಭಾಶಯಗಳ ಸಂದೇಶ ಹಂಚಿಕೆಯಾಗಿವೆ. ಇದರ ಜತೆಗೇ, ಸಾಮಾಜಿಕ ತಾಣ ಟ್ವಿಟರ್‌ನಲ್ಲಿ #HBDayAmitShah #HappyBirthdayAmitShah ಎಂಬ ಹ್ಯಾಷ್‌ ಟ್ಯಾಗ್‌ಗಳು ಟ್ರೆಂಡಿಂಗ್‌ ಆಗಿವೆ. 

ಸಮರ್ಥ ಸಂಘಟಕ: ಮೋದಿ 
ಕ್ರಿಯಾಶೀಲ, ಅನುಭವಿ, ನುರಿತ ಸಂಘಟಕ ಮತ್ತು ಸರ್ಕಾರದಲ್ಲಿ ನನ್ನ ಸಹೋದ್ಯೋಗಿಯಾಗಿರುವ ಅಮಿತ್ ಶಾ ಅವರಿಗೆ ಜನ್ಮದಿನದ ಶುಭಾಶಯಗಳು. ಸರ್ಕಾರದಲ್ಲಿ ಪ್ರಧಾನ ಪಾತ್ರ ನಿರ್ವಹಿಸುತ್ತಿರುವುದರ ಜತೆಗೇ ಅವರು, ಭಾರತವನ್ನು ಸದೃಢಗೊಳಿಸುವುದರ ಕಡೆಗೆ ಗಮನಾರ್ಹ ಕೊಡುಗೆ ನೀಡುತ್ತಿದ್ದಾರೆ. ದೇವರು ಅವರಿಗೆ ದೀರ್ಘಾಯುಷ್ಯ ನೀಡಲಿ ಎಂದು ಮೋದಿ ಟ್ವಿಟರ್‌ನಲ್ಲಿ ಆಶಿಸಿದ್ದಾರೆ. 

ಕಠಿಣ ಪರಿಶ್ರಮಿ: ರಾಜನಾಥ್‌ ಸಿಂಗ್‌ 
ಕಠಿಣ ಪರಿಶ್ರಮಿ, ರಾಜಕೀಯ ನಿಪುಣ, ಸಹೋದ್ಯೋಗಿ ಅಮಿತ್‌ಶಾ ಅವರಿಗೆ ಜನ್ಮದಿನದ ಶುಭಾಶಯಗಳು. ದೇಶದ ಗೃಹ ಸಚಿವರಾಗಿರುವ ಅವರು ಆಂತರಿಕ ಭದ್ರತೆಯನ್ನು ಬಲಪಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಟ್ವೀಟ್‌ ಮಾಡಿದ್ದಾರೆ.  

ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರೂ ಟ್ವೀಟ್‌ ಮಾಡಿದ್ದು, ಶುಭಾಶಯ ಕೋರಿದ್ದಾರೆ.
 

ಪ್ರತಿಕ್ರಿಯಿಸಿ (+)