ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಗಾ ನದಿ ಉಳಿವಿಗಾಗಿ ಹೋರಾಟ: ಸಂತ್‌ ಗೋಪಾಲ್‌ದಾಸ್‌ ಆಸ್ಪತ್ರೆಗೆ ದಾಖಲು

Last Updated 14 ಅಕ್ಟೋಬರ್ 2018, 6:30 IST
ಅಕ್ಷರ ಗಾತ್ರ

‍‍ಋಷಿಕೇಶ್‌: ಗಂಗಾ ನದಿ ತಟದಲ್ಲಿ ಗಣಿಗಾರಿಕೆ ವಿರೋಧಿಸಿ 110 ದಿನಗಳಿಂದ ಹೋರಾಟ ನಡೆಸುತ್ತಿದ್ದ 36 ವರ್ಷದ ಸಂತ ಗೋಪಾಲ್‌ದಾಸ್‌ ಅವರನ್ನು ಋಷಿಕೇಶದಲ್ಲಿರುವ ಅಖಿಲ ಭಾರತೀಯ ವೈದ್ಯ ವಿಜ್ಞಾನ ಸಂಸ್ಥೆ (ಏಮ್ಸ್‌) ದಾಖಲಿಸಲಾಗಿದೆ.

ಇದೇ ಮಾದರಿ ಹೋರಾಟ ನಡೆಸಿದ್ದ ಮತ್ತೊಬ್ಬ ಸಂತ ಜಿ.ಡಿ.ಅಗರ್‌ವಾಲ್‌ ಎರಡು ದಿನಗಳ ಹಿಂದೆ ಕೊನೆಯುಸಿರೆಳೆದಿದ್ದರು.

‘ಕಳೆದ ಮೂರು ದಿನಗಳಿಂದ ಗೋಪಾಲ್‌ದಾಸ್‌ ಅವರು ನೀರು ಕುಡಿಯುವುದನ್ನು ನಿಲ್ಲಿಸಿದ್ದರು. ಈ ಕಾರಣದಿಂದ ಅವರನ್ನು ಬೆಳಿಗ್ಗೆ 3.45ರ ಸುಮಾರಿಗೆ ಆಸ್ಪತ್ರೆಗೆ ಕರೆತರಲಾಗಿದ್ದು, ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಕಲ್ಪಿಸಲಾಗಿದೆ’ ಎಂದು ಆಸ್ಪತ್ರೆಯ ನಿರ್ದೇಶಕ ಬ್ರಿಜೇಂದ್ರಸಿಂಗ್‌ ತಿಳಿಸಿದರು.

‘ಗೋಪಾಲ್‌ದಾಸ್‌ ಅವರ ಆರೋಗ್ಯಸ್ಥಿತಿ ಸಂಪೂರ್ಣ ಬಿಗಡಾಯಿಸಿದೆ,. ನಿರ್ಜಲೀಕರಣದಿಂದ ಬಳಲುತ್ತಿದ್ದು, ಮೀನಾಕ್ಷಿ ಧರ್‌ ನೇತೃತ್ವದ ನುರಿತ ವೈದ್ಯರ ತಂಡ ನಿಗಾವಹಿಸುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT