ಶನಿವಾರ, ಫೆಬ್ರವರಿ 29, 2020
19 °C
ಇ.ಡಿ ತನಿಖೆಯಲ್ಲಿ ಬಹಿರಂಗ: ಆರೋಫ ಅಲ್ಲಗಳೆದ ಪಿಎಫ್‌ಐ, ಸಿಬಲ್

ಸಿಎಎ: ಪ್ರತಿಭಟನೆಗೆ ಪಿಎಫ್‌ಐ ಹಣ ಬಳಕೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ನಡೆದ ಹಿಂಸಾತ್ಮಕ ಪ್ರತಿಭಟನೆಗಳಿಗೂ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಗೂ ‘ಹಣಕಾಸು ಸಂಬಂಧವಿದೆ‘ ಎಂದು ತನಿಖಾ ಸಂಸ್ಥೆ ಜಾರಿ ನಿರ್ದೇಶನಾಲಯ (ಇ.ಡಿ) ಹೇಳಿದೆ.

ಸಂಸತ್ತಿನಲ್ಲಿ ಸಿಎಎ ಮಸೂದೆಗೆ ಅನುಮೋದನೆ ದೊರೆತ ನಂತರ ಉತ್ತರ ಪ್ರದೇಶದಲ್ಲಿ ಬ್ಯಾಂಕ್‌ನ ವಿವಿಧ ಖಾತೆಗಳಿಗೆ ₹120.5 ಕೋಟಿ ಜಮೆಯಾಗಿದೆ ಎಂದೂ ಇ.ಡಿ ಗುರುತಿಸಿದೆ. ‘ಇದು, ಆಧಾರರಹಿತ ಆರೋಪ’ ಎಂದು ಪಿಎಫ್‌ಐ ತಳ್ಳಿಹಾಕಿದೆ.

ಹಣ ಅಕ್ರಮ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿ 2018ರಿಂದಲೂ ಕೇರಳ ಮೂಲದ ಪಿಎಫ್‌ಐ ಸಂಘಟನೆಯ ವಿರುದ್ಧ ಇ.ಡಿ ತನಿಖೆ ನಡೆಸುತ್ತಿದೆ. ಖಾತೆಗಳಿಗೆ ನಗದು, ಆರ್‌ಟಿಜಿಎಸ್‌ ಮೂಲಕ ಹಣ ಜಮೆ ಆಗಿದೆ. ಆಗಾಗ್ಗೆ ಚೆಕ್‌ ಮೂಲಕ ಜಮೆಯಾಗಿದೆ ಎಂದು ಹೇಳಿದೆ.  ಉತ್ತರ ಪ್ರದೇಶದಲ್ಲಿ ಸಿಂಡಿಕೇಟ್‌ ಬ್ಯಾಂಕ್‌ನ ನೆಹರೂ ಪ್ಲೇಸ್‌ ಶಾಖೆಯಲ್ಲಿರುವ ಪಿಎಫ್‌ಐ ಖಾತೆಗೆ ದೊಡ್ಡ ಪ್ರಮಾಣದಲ್ಲಿ ಸಾಕಷ್ಟು ಬಾರಿ ಹಣ ಜಮೆಯಾಗಿರುವ ದಾಖಲೆ ಇದೆ. ಬಹರೀಚ್, ಬಿಜ್ನೂರ್, ಹಪುರ್, ಶಾಮ್ಲಿ ಮತ್ತು ದಸ್ನಾದ ಶಾಖೆಗಳ ಖಾತೆಗಳಲ್ಲೂ ಇದೇ ಸ್ಥಿತಿ ಇದೆ. ಬ್ಯಾಂಕ್‌ನ ಕೋಜಿಕ್ಕೊಡ್‌ ಶಾಖೆಯಲ್ಲಿರುವ ಪಿಎಫ್‌ಐ ಖಾತೆ ಪರಿಶೀಲಿಸಿದಾಗ ಹಿರಿಯ ವಕೀಲ, ಕಾಂಗ್ರೆಸ್‌ ಮುಖಂಡ ಕಪಿಲ್‌ ಸಿಬಲ್‌, ವಕೀಲರಾದ ಇಂದಿರಾ ಜೈಸಿಂಗ್, ದುಶ್ಯಂತ್‌ ಎ ದವೆ ಅವರಿಗೆ ಹಣ ಪಾವತಿಸಿರುವುದು ಗೊತ್ತಾಗಿದೆ ಎಂದು ಇ.ಡಿ ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು