ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತ್ಯೇಕವಾಸ: ಆ್ಯಪ್‌ ಮೂಲಕ ಪೊಲೀಸರ ನಿಗಾ

ಹೋಮ್ ಕ್ವಾರಂಟೈನ್ ಉಲ್ಲಂಘನೆ ತಡೆಗೆ ತಮಿಳುನಾಡು ಕ್ರಮ
Last Updated 26 ಮಾರ್ಚ್ 2020, 20:00 IST
ಅಕ್ಷರ ಗಾತ್ರ

ಚೆನ್ನೈ:ಮನೆ ಪ್ರತ್ಯೇಕವಾಸದಲ್ಲಿ ಇರುವವರ(ಹೋಮ್ ಕ್ವಾರಂಟೈನ್‌)ಚಲನವಲನದ ಮೇಲೆ ನಿಗಾ ಇರಿಸುವ ಮತ್ತು ಅವರು,ಪ್ರತ್ಯೇಕವಾಸದ ನಿಯಮಗಳನ್ನು ಮೀರದಂತೆ ಎಚ್ಚರವಹಿಸುವ ಸಲುವಾಗಿ ತಮಿಳುನಾಡು ಸರ್ಕಾರವು ಸ್ಮಾರ್ಟ್‌ಪೊನ್ ಅಪ್ಲಿಕೇಷನ್ ಅಭಿವೃದ್ಧಿಪಡಿಸಿದೆ.

ರಾಜ್ಯದ ಹಿರಿಯ ಐಪಿಎಸ್‌ ಅಧಿಕಾರಿ ರೋಹಿತ್ ನಂದನ್ ಅವರ ಮಾರ್ಗದರ್ಶನದಲ್ಲಿ ಪಿಕ್ಸಾನ್ ಎಐ ಸಲ್ಯೂಷನ್ಸ್‌ ಪ್ರೈವೇಟ್‌ ಲಿಮಿಟೆಡ್ ಈ ಆ್ಯಪ್ ಅಭಿವೃದ್ಧಿಪಡಿಸಿದೆ. ರಾಜ್ಯದಲ್ಲಿ15,492ಜನರಿಗೆ ಮನೆ ಪ್ರತ್ಯೇಕವಾಸ ವಿಧಿಸಲಾಗಿದೆ.ಈ ಎಲ್ಲರ ಪೋನ್‌ಗಳಿಗೆ ಪೊಲೀಸ್ ಇಲಾಖೆಯು ಎಸ್‌ಎಂಎಸ್‌ ಮಾಡಿ,ಆ್ಯಪ್‌ನ ಲಿಂಕ್ ಕಳುಹಿಸಲಿದೆ.ಆ ವ್ಯಕ್ತಿಗಳು ಆ್ಯಪ್‌ ಅನ್ನು ತಮ್ಮ ಫೋನ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳಬೇಕು.

ಅಮೆಜಾನ್ ಇಂಡಿಯಾದ ಸರ್ವರ್‌ ಅನ್ನು ಬಳಸಿಕೊಂಡು ಈ ಆ್ಯಪ್ ಕಾರ್ಯನಿರ್ವಹಿಸಲಿದೆ.ಫೋನ್‌ನಲ್ಲಿರುವ ಜಿಪಿಎಸ್‌ ಬಳಸಿಕೊಂಡು,ವ್ಯಕ್ತಿಯು ಎಲ್ಲಿದ್ದಾನೆ ಎಂಬುದರ ಮೇಲೆ ಪೊಲೀಸರು ನಿಗಾ ಇರಿಸಲಿದ್ದಾರೆ. ಆ ವ್ಯಕ್ತಿಯು ತನ್ನ ಮನೆಯಿಂದ500ಮೀಟರ್‌ನಷ್ಟು ದೂರ ಸರಿಯುತ್ತಿದ್ದಂತೆಯೇ,ಆ್ಯಪ್‌ನ ಮೂಲಕ ಪೊಲೀಸ್ ನಿಯಂತ್ರಣ ಕೊಠಡಿಗೆ ಸಂದೇಶ ಹೋಗಲಿದೆ.ಆಗ ಪೊಲೀಸರು ಆ ವ್ಯಕ್ತಿಯನ್ನು ಸಂಪರ್ಕಿಸಿ,ಕ್ರಮ ತೆಗೆದುಕೊಳ್ಳಲಿದ್ದಾರೆ.

ಆ ವ್ಯಕ್ತಿ ಅನವಶ್ಯಕವಾಗಿ ಹೊರಗೆ ಬಂದಿದ್ದರೆ,ಪ್ರಕರಣ ದಾಖಲಾಗುತ್ತದೆ.ಆತನ ಆರೋಗ್ಯದಲ್ಲಿ ಏರುಪೇರಾಗಿ,ಆಸ್ಪತ್ರೆಗೆ ಹೋಗುತ್ತಿದ್ದರೆ ಅಗತ್ಯ ನೆರವು ದೊರೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT