ಸಿಬಿಎಸ್‌ಇ ಟಾಪರ್‌ ಮೇಲೆ ಅತ್ಯಾಚಾರ: ಯೋಧನ ವಿರುದ್ಧ ಎಫ್‌ಐಆರ್‌

7

ಸಿಬಿಎಸ್‌ಇ ಟಾಪರ್‌ ಮೇಲೆ ಅತ್ಯಾಚಾರ: ಯೋಧನ ವಿರುದ್ಧ ಎಫ್‌ಐಆರ್‌

Published:
Updated:
ಅತ್ಯಾಚಾರ ಆರೋಪಿಗಳು

ಚಂಡಿಗಡ: ಹರಿಯಾಣದ ಮಹೇಂದ್ರಗಡ ಜಿಲ್ಲೆಯ ರೇವಡಿಯಲ್ಲಿ 19 ವರ್ಷದ ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳು ಮೂವರ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ. ಈ ಪೈಕಿ, ಒಬ್ಬ ಸೇನೆಯ ಯೋಧನಾಗಿದ್ದಾನೆ. 

ಎಂಟರಿಂದ ಹತ್ತು ಜನ ಅತ್ಯಾಚಾರ ಎಸಗಿದ್ದಾರೆ ಎಂದು ಯುವತಿ ಆರೋಪಿಸಿದ್ದಾರೆ. ಈ ಪೈಕಿ ಮೂವರ ಹೆಸರನ್ನು ಅವರು ಹೇಳಿದ್ದು, ಇವರಲ್ಲಿ ಯೋಧ ಪಂಕಜ್‌ ಫೌಜಿಯೂ ಸೇರಿದ್ದಾನೆ. ಪಂಕಜ್‌ ಬಂಧನಕ್ಕೆ ಅಗತ್ಯ ಸಹಕಾರ ನೀಡುವುದಾಗಿ ಸೇನೆಯೂ ಹೇಳಿದೆ. ರಜೆ ಮೇಲೆ ಪಂಕಜ್‌ ಗ್ರಾಮಕ್ಕೆ ಬಂದಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಪರಿಚಯವಿದ್ದವರೇ ಈ ಕೃತ್ಯ ಎಸಗಿದ್ದಾರೆ ಎಂದು ಸಂತ್ರಸ್ತೆಯ ತಂದೆ ದೂರು ನೀಡಿದ್ದಾರೆ. ‘ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದು, ಆರೋಪಿಗಳನ್ನು ವಶಕ್ಕೆ ಪಡೆಯಲಾಗುವುದು’ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಮುಖ್ಯಮಂತ್ರಿ ಕಾರ್ಯಕ್ರಮಕ್ಕೆ ನಿಯೋಜನೆ: 

ಸಂತ್ರಸ್ತ ಯುವತಿ ಮತ್ತು ಆರೋಪಿಗಳು ಒಂದೇ ಊರಿನವರಾಗಿದ್ದಾರೆ. ಆರೋಪಿಗಳ ಸ್ಥಳ ಹೇಳುತ್ತೇವೆ, ಅವರನ್ನು ಬಂಧಿಸಿ ಎಂದು ಹೇಳಿದರೂ, ಮುಖ್ಯಮಂತ್ರಿ ಕಾರ್ಯಕ್ರಮಕ್ಕೆ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. ಸಿಬ್ಬಂದಿ ಕೊರತೆ ಇರುವುದರಿಂದ ಅತ್ಯಾಚಾರ ಆರೋಪಿಗಳ ಶೋಧಕ್ಕೆ ತೆರಳಲು ಆಗುವುದಿಲ್ಲ ಎಂದು ಪೊಲೀಸರು ಹೇಳುತ್ತಿದ್ದಾರೆ’ ಎಂಬುದಾಗಿ ಗ್ರಾಮದ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

‘ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿದ್ದರೆ ಆರೋಪಿಗಳನ್ನು ಬಂಧಿಸಬಹುದಾಗಿತ್ತು’ ಎಂದು ಗ್ರಾಮಸ್ಥರು ಹೇಳಿದ್ದಾರೆ. 

ಈ ಕೃತ್ಯವನ್ನು ರಾಷ್ಟ್ರೀಯ ಮಹಿಳಾ ಆಯೋಗ ಖಂಡಿಸಿದ್ದು, ಪ್ರಕರಣದ ತನಿಖೆ ಕುರಿತು ವರದಿ ನೀಡುವಂತೆ ಹರಿಯಾಣ ಪೊಲೀಸ್‌ ಮುಖ್ಯಸ್ಥರಿಗೆ ಸೂಚಿಸಿದೆ. 

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹರಿಯಾಣ ಪೊಲೀಸರು ಮೂವರು ಆರೋಪಿಗಳ ಛಾಯಾಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ. ಇವರಲ್ಲಿ ಸೇನಾ ಯೋಧನೇ ಮುಖ್ಯ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. 

ಆರೋಪಿಗಳ ಸುಳಿವು ನೀಡಿದವರಿಗೆ ₹1 ಲಕ್ಷ  ಬಹುಮಾನ ನೀಡುವುದಾಗಿ ಹರಿಯಾಣ ಪೊಲೀಸರು ಘೋಷಿಸಿದ್ದಾರೆ.

ಅತ್ಯಾಚಾರಕ್ಕೆ ಒಳಗಾದ ಯುವತಿ ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದರು. ಇವರಿಗೆ ರಾಷ್ಟ್ರಪತಿಯಿಂದ ಪ್ರಶಸ್ತಿ ಕೂಡ ಲಭಿಸಿತ್ತು. ಕೋಚಿಂಗ್‌ ಕೇಂದ್ರಕ್ಕೆ ಹೋಗುತ್ತಿದ್ದ  ಆಕೆಯನ್ನು ಅಪಹರಿಸಿ ಅತ್ಯಾಚಾರ ಎಸಗಲಾಗಿದೆ. ಮಹೀಂದರಗಡ ಜಿಲ್ಲೆಯಲ್ಲಿ ಈ ಕೃತ್ಯ ನಡೆದಿದೆ.

ಪ್ರಮುಖ ಆರೋಪಿಯಾಗಿರುವ ಯೋಧ ಪಂಕಜ್ ರಾಜಸ್ಥಾನ ಮೂಲದವನು. ಇವನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ ಎಂದು ಹರಿಯಾಣ ಡಿಜಿಪಿ ಸಂಧು ತಿಳಿಸಿದ್ದಾರೆ. ಮತ್ತಿಬ್ಬರು ಆರೋಪಿಗಳನ್ನು ಮಣೀಶ್‌ ಮತ್ತು ನಿಶೂ ಎಂದು ಗುರುತಿಸಲಾಗಿದೆ. 

ಇದನ್ನು ಓದಿ: ಚಂಡಿಗಡ: ಸಿಬಿಎಸ್‌ಇ ಟಾಪರ್‌ ಮೇಲೆ ಸಾಮೂಹಿಕ ಅತ್ಯಾಚಾರ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 1

  Frustrated
 • 4

  Angry

Comments:

0 comments

Write the first review for this !