ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲು ನಿಲ್ದಾಣಗಳಲ್ಲೂ ಭದ್ರತಾ ತಪಾಸಣೆ: ದೇಶದ 202 ರೈಲು ನಿಲ್ದಾಣ ಆಯ್ಕೆ

ಹುಬ್ಬಳ್ಳಿ, ಅಲಹಾಬಾದ್‌ ರೈಲು ನಿಲ್ದಾಣದಲ್ಲಿ ಅಳವಡಿಕೆ
Last Updated 6 ಜನವರಿ 2019, 20:17 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕದ ಹುಬ್ಬಳ್ಳಿ ಸೇರಿದಂತೆ ದೇಶದ 202 ರೈಲು ನಿಲ್ದಾಣಗಳಲ್ಲಿ ವಿಮಾನ ನಿಲ್ದಾಣದ ಮಾದರಿಯ ಭದ್ರತಾ ವ್ಯವಸ್ಥೆ ಶೀಘ್ರ ಜಾರಿಗೆ ಬರಲಿದೆ.

ಪ್ರವೇಶ ದ್ವಾರದಲ್ಲಿ ವಿವಿಧ ಹಂತಗಳ ಭದ್ರತಾ ತಪಾಸಣೆಗೆ ಒಳಪಟ್ಟ ನಂತರವೇ ಪ್ರಯಾಣಿಕರಿಗೆ ರೈಲು ನಿಲ್ದಾಣದೊಳಗೆ ಪ್ರವೇಶ ದೊರೆಯಲಿದೆ.

ಅದಕ್ಕಾಗಿಯೇ ಇನ್ನು ಮುಂದೆ ಪ್ರಯಾಣಿಕರು ತಾವು ಪ್ರಯಾಣಿಸುವ ರೈಲು ಹೊರಡುವ ನಿಗದಿತ ಸಮಯಕ್ಕಿಂತ 15 ರಿಂದ 20 ನಿಮಿಷ ಮುಂಚಿತವಾಗಿ ರೈಲು ನಿಲ್ದಾಣಕ್ಕೆ ಬರಬೇಕಾಗುತ್ತದೆ.

ವಿಮಾನ ನಿಲ್ದಾಣಗಳಲ್ಲಿರುವಂತೆ ಪ್ರಯಾಣಿಕರು ಮೂರ‍್ನಾಲ್ಕು ತಾಸು ಮುಂಚಿತವಾಗಿ ಬರುವ ಅಗತ್ಯವಿಲ್ಲಎಂದು ರೈಲ್ವೆ ಸುರಕ್ಷತಾ ಪಡೆಯ ಮಹಾನಿರ್ದೇಶಕ ಅರುಣ್‌ ಕುಮಾರ್‌ ತಿಳಿಸಿದ್ದಾರೆ.

ಇದಕ್ಕಾಗಿ ದೇಶದ 202 ಪ್ರಮುಖ ರೈಲು ನಿಲ್ದಾಣಗಳನ್ನು ಗುರುತಿಸಲಾಗಿದ್ದು ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡ ಭದ್ರತಾ ತಪಾಸಣಾ ವ್ಯವಸ್ಥೆ ಅಳವಡಿಸಲು ನೀಲನಕ್ಷೆ ಸಿದ್ಧವಾಗಿದೆ ಎಂದು ತಿಳಿಸಿದ್ದಾರೆ.

ಹುಬ್ಬಳ್ಳಿ ಮತ್ತು ಅಲಹಾಬಾದ್‌ ರೈಲು ನಿಲ್ದಾಣಗಳಲ್ಲಿ ಈ ವ್ಯವಸ್ಥೆ ಅಳವಡಿಸಲಾಗಿದ್ದು, ಸದ್ಯದಲ್ಲಿಯೇ ಕಾರ್ಯಾರಂಭ ಮಾಡಲಿದೆ ಎಂದು ಕುಮಾರ್‌ ತಿಳಿಸಿದ್ದಾರೆ.

ಯೋಜನೆಯ ನೀಲನಕ್ಷೆ

ಸಮಗ್ರ ಭದ್ರತಾ ವ್ಯವಸ್ಥೆ (ಐಎಸ್‌ಎಸ್‌) ಅಡಿಯಲ್ಲಿ ರೈಲು ನಿಲ್ದಾಣಗಳಲ್ಲಿ ಬಹುಹಂತದ ಭದ್ರತಾ ತಪಾಸಣಾ ಯೋಜನೆ ಬಹುತೇಕ ಸಿದ್ಧಗೊಂಡಿದೆ.

* ವಿಮಾನ ನಿಲ್ದಾಣಗಳಂತೆ ರೈಲು ನಿಲ್ದಾಣಗಳಲ್ಲಿಯೂ ಬಿಗಿ ಭದ್ರತಾ ತಪಾಸಣಾ ವ್ಯವಸ್ಥೆ ಜಾರಿಗೆ ತರಲಾಗುವುದು

* ಅದಕ್ಕಾಗಿ ಎಷ್ಟು ಪ್ರವೇಶ ದ್ವಾರ ತೆರೆಯಬೇಕಾಗುತ್ತದೆ ಎಂಬುದನ್ನು ಗುರುತಿಸಲಾಗುತ್ತಿದೆ. ಪ್ರತಿ ಪ್ರವೇಶ ದ್ವಾರದಲ್ಲಿ ಭದ್ರತಾ ತಪಾಸಣೆ ನಡೆಸಲಾಗುವುದು

* ಉಳಿದ ದ್ವಾರಗಳನ್ನು ಮುಚ್ಚಿ, ಸುತ್ತಲೂ ಆವರಣ ಗೋಡೆ ನಿರ್ಮಿಸಲಾಗುವುದು.

* ಆವರಣ ಗೋಡೆ ಇರದ ಕಡೆಗಳಲ್ಲಿ ಭದ್ರತಾ ಸಿಬ್ಬಂದಿ ನಿಯೋಜಿಸಲಾಗುವುದು

* ಇದರಿಂದ ಭದ್ರತಾ ವ್ಯವಸ್ಥೆ ಬಲಗೊಳ್ಳುವುದಲ್ಲದೆ, ಸಿಬ್ಬಂದಿ ಸಂಖ್ಯೆ ಕಡಿಮೆ ಆಗಲಿದೆ

**

ಅಂಕಿ–ಸಂಖ್ಯೆ

202:ಕಣ್ಗಾವಲು ವ್ಯವಸ್ಥೆ ಜಾರಿಯಾಗುವರೈಲು ನಿಲ್ದಾಣಗಳ ಸಂಖ್ಯೆ

2016:ಯೋಜನೆಗೆ ಒಪ್ಪಿಗೆ ದೊರೆತ ವರ್ಷ

₹385.06 ಕೋಟಿ:ಯೋಜನೆಗೆ ತಗಲುವ ಅಂದಾಜು ವೆಚ್ಚ

ರೈಲು ನಿಲ್ದಾಣದಲ್ಲಿ ತಪಾಸಣೆ ಹೇಗಿರುತ್ತದೆ?

ಸಿಸಿ ಟಿವಿ ಕ್ಯಾಮೆರಾ

ಪ್ರವೇಶ ನಿಯಂತ್ರಣ

ವ್ಯಕ್ತಿಗಳು ಮತ್ತು ಬ್ಯಾಗ್‌ಗಳ ತಪಾಸಣೆ

ಬಾಂಬ್‌ ಪತ್ತೆ ಸಾಧಕಗಳು

ಬಾಂಬ್‌ ನಿಷ್ಕ್ರಿಯ ವ್ಯವಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT