ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ರೇನ್ ಸೇನೆ ಜೊತೆ ಘರ್ಷಣೆ: 16 ಮಂದಿ ಸಾವು

Last Updated 31 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಗಾಜಾ ನಗರ, ಪ್ಯಾಲೆಸ್ಟೀನ್: ಇಸ್ರೇಲ್ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸಾವಿರಾರು ಪ್ಯಾಲೆಸ್ಟೀನಿಯರು ಹಾಗೂ ಇಸ್ರೇಲ್ ಸೇನೆ ಮಧ್ಯೆ ನಡೆದ ಘರ್ಷಣೆಯಲ್ಲಿ 16 ಮಂದಿ ಮೃತಪಟ್ಟಿದ್ದಾರೆ.

1,400ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಸ್ವತಂತ್ರ ತನಿಖೆ ನಡೆಸುವಂತೆ ವಿಶ್ವಸಂಸ್ಥೆ ಅಧ್ಯಕ್ಷ ಆಂಟೊನಿಯೊ ಗುಟೆರಸ್ ಆದೇಶ ನೀಡಿದ್ದಾರೆ. ಇದು 2014ರ ಗಾಜಾ ಯುದ್ಧದ ಬಳಿಕ ಒಂದೇ ದಿನದಲ್ಲಿ ನಡೆದ ಭೀಕರ ಹಿಂಸಾಚಾರ ಎನ್ನಲಾಗಿದೆ.

ಹಮಾಸ್‌ನ ಮೂರು ಶಿಬಿರಗಳನ್ನೂ ಗುರಿಯಾಗಿಸಿ ಇಸ್ರೇಲ್ ಪಡೆಗಳು ಗಾಜಾಪಟ್ಟಿಯ ಮೇಲೆ ವಾಯುದಾಳಿ ನಡೆಸಿದವು. ತಮ್ಮ ಸೈನಿಕರ ವಿರುದ್ಧ ನಡೆದ ದಾಳಿಗೆ ಪ್ರತ್ಯುತ್ತರವಾಗಿ ವಾಯುದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಸಮರ್ಥನೆ ನೀಡಿದೆ.

ಪ್ರತಿಭಟನೆಯಲ್ಲಿ ತೊಡಗಿದ್ದವರಲ್ಲಿ ಮಹಿಳೆಯರು, ಮಕ್ಕಳೂ ಇದ್ದರು. ಇಸ್ರೇಲ್‌ನ ಪೂರ್ವ ಹಾಗೂ ಉತ್ತರ ಗಡಿಯಿಂದ ಸುತ್ತುವರಿದಿರುವ ನಿರ್ಬಂಧಿತ ಪ್ರದೇಶದಲ್ಲಿ ಪ್ರತಿಭಟನಾಕಾರರು ಜಮಾಯಿಸಿದ್ದರು. ಭದ್ರಕೋಟೆಯಂತಿದ್ದ ರಕ್ಷಣಾ ಬೇಲಿಯತ್ತ ಪ್ರತಿಭಟನಾಕಾರರು ಧಾವಿಸಿದರು. ಗುಂಪನ್ನು ಹಿಂದಕ್ಕೆ ಕಳಿಸಲು ಇಸ್ರೇಲ್ ಪಡೆಗಳು ಡ್ರೋಣ್ ಬಳಸಿ ಅಶ್ರುವಾಯು ಸಿಡಿಸಿದವು ಎಂದು ಪೊಲೀಸ್ ಇಲಾಖೆ ವಕ್ತಾರರು ತಿಳಿಸಿದ್ದಾರೆ.

ಇಸ್ರೇಲ್ ಸಮರ್ಥನೆ

ಗಾಜಾ ಜನರು ನಡೆಸಿದ ಪ್ರತಿಭಟನೆ ಶಾಂತಿಯುತವಾಗಿರಲಿಲ್ಲ ಎಂದು ಇಸ್ರೇಲ್ ಹೇಳಿದೆ. ಪ್ರತಿಭಟನಾಕಾರರ ಗುಂಪಿನಲ್ಲಿ ಉಗ್ರರೂ ಇದ್ದರು. ಬೇಲಿಯನ್ನು ಧ್ವಂಸಗೊಳಿಸಿ, ಗಡಿ ಪ್ರವೇಶಿಸಿ ದಾಳಿ ನಡೆಸುವುದು ಪ್ರತಿಭಟನಾಕಾರರ ಉದ್ದೇಶವಾಗಿತ್ತು ಎಂದು ಸೇನೆ ಆರೋಪಿಸಿದೆ.

‘30 ಸಾವಿರಕ್ಕೂ ಹೆಚ್ಚಿದ್ದ ಪ್ರತಿಭಟನಾಕಾರರು ಸೇನೆಯತ್ತ ಬೆಂಕಿಯುಂಡೆ ಎಸೆದು, ಬೆಂಕಿ ಹಚ್ಚಿದ್ದ ಟೈರ್‌ಗಳನ್ನು ಉರುಳಿ ಬಿಟ್ಟರು. ಹೀಗಾಗಿ ಭದ್ರತಾ ಸಿಬ್ಬಂದಿ ಪ್ರತ್ಯುತ್ತರ  ನೀಡಬೇಕಾಯಿತು’ ಎಂದು ಸೇನೆ ಸ್ಪಷ್ಟನೆ ನೀಡಿದೆ.

ಇಸ್ರೇಲ್ ರಚನೆ ವೇಳೆ ಪಲಾಯನ ಮಾಡಿದ ಹಾಗೂ ಗಡೀಪಾರು ಶಿಕ್ಷೆಗೆ ಒಳಗಾದ ಸಾವಿರಾರು ನಿರಾಶ್ರಿತರು ತಮ್ಮ ತವರಿಗೆ ಹಿಂದಿರುಗುವುದಕ್ಕೆ ಅವಕಾಶ ನೀಡುಬೇಕು ಎಂಬುದು ಪ್ರತಿಭಟಕಾಕಾರರ ಬೇಡಿಕೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT