ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಶೋಕ್‌ ಲೇಲ್ಯಾಂಡ್‌ ಟ್ರಕ್‌ಗಳಿಗೆ ಬಿಎಸ್‌–6 ಪ್ರಮಾಣಪತ್ರದ ಗರಿ

Last Updated 4 ಸೆಪ್ಟೆಂಬರ್ 2019, 8:54 IST
ಅಕ್ಷರ ಗಾತ್ರ

ಚೆನ್ನೈ:ಭಾರತೀಯ ಟ್ರಕ್ ಮತ್ತು ಬಸ್ ತಯಾರಿಕಾ ಕಂಪನಿ ಅಶೋಕ್ ಲೇಲ್ಯಾಂಡ್ ತನ್ನ ಎಲ್ಲಾ ಟ್ರಕ್‌ ಎಂಜಿನ್‌ಗಳಿಗೆ ಭಾರತ್ ಸ್ಟೇಜ್–6 (ಬಿಎಸ್‌–6) ಪ್ರಮಾಣ ಪತ್ರ ಪಡೆದಿದೆ. ತನ್ನ ಎಲ್ಲಾ ವಾಣಿಜ್ಯ ವಾಹನಗಳಿಗೆ ಬಿಎಸ್‌–6 ಪ್ರಮಾಣ ಪತ್ರ ಪಡೆದ ಮೊದಲ ಭಾರತೀಯ ಕಂಪನಿ ಎಂಬ ಹೆಗ್ಗಳಿಕೆಗೆ ಅಶೋಕ್ ಲೇಲ್ಯಾಂಡ್ ಪಾತ್ರವಾಗಿದೆ.

ನಮ್ಮ ಎಲ್ಲಾ ಬಿಎಸ್‌–6 ಎಂಜಿನ್‌ಗಳಲ್ಲಿ ಬಳಸಲಾಗಿರುವ ತಂತ್ರಜ್ಞಾನಗಳನ್ನು ಸಂಪೂರ್ಣವಾಗಿ ನಾವೇ ಅಭಿವೃದ್ಧಿಪಡಿಸಿದ್ದೇವೆ, ಬಿಎಸ್‌–6 ಪರಿಮಾಣ ಜಾರಿಗೆ ಬರಲು ಇನ್ನೂ ಏಳು ತಿಂಗಳು ಸಮಯವಿದೆ. ಅಲ್ಲಿಯವರೆಗೆ ಈ ತಂತ್ರಜ್ಞಾನಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸುತ್ತೇವೆ ಎಂದು ಕಂಪನಿ ಹೇಳಿದೆ.

ಭಾರತ ಸರ್ಕಾರದ ಅಧೀನ ಸಂಸ್ಥೆ ‘ಆಟೊಮೇಟಿವ್ ರೀಸರ್ಚ್ ಆಸೋಸಿಯೇಷನ್ ಆಫ್ ಇಂಡಿಯಾ–ಎಆರ್‌ಎಐ’ ಈ ಎಂಜಿನ್‌ ಮತ್ತು ತಂತ್ರಜ್ಞಾನಗಳನ್ನು ಪರಿಶೀಲಿಸಿ, ಪ್ರಮಾಣೀಕರಿಸಿದೆ. ಪ್ರಮಾಣಪತ್ರಗಳನ್ನು ಅಶೋಕ್ ಲೇಲ್ಯಾಂಡ್‌ಗೆ ಎಆರ್‌ಎಐ ಮಂಗಳವಾರ ಹಸ್ತಾಂತರಿಸಿದೆ.

ಕಂಪನಿಯು 70 ಬಿಎಚ್‌ಪಿ ಸಾಮರ್ಥ್ಯದ ಮಿನಿಟ್ರಕ್‌ನಿಂದ 360 ಬಿಎಚ್‌ಪಿ ಸಾಮರ್ಥ್ಯದ ಭಾರಿ ಟ್ರಕ್‌ಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತದೆ. ಈ ಎಲ್ಲಾ ಟ್ರಕ್‌ಗಳ ಎಂಜಿನ್‌ಗಳನ್ನು ಬಿಎಸ್‌–6 ಪರಿಮಾಣಕ್ಕೆ ಪರಿವರ್ತಿಸಲಾಗಿದೆ. ಬಿಎಸ್‌–6 ಪರಿಮಾಣ ಜಾರಿಗೆ ಬಂದ ನಂತರ ಈ ಟ್ರಕ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿರಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT