ಭಾನುವಾರ, ಆಗಸ್ಟ್ 25, 2019
20 °C

ಎನ್‌ಆರ್‌ಸಿ: ಆನ್‌ಲೈನ್‌ನಲ್ಲಿ ಮಾತ್ರ ಪಟ್ಟಿ

Published:
Updated:

ನವದೆಹಲಿ: ಅಸ್ಸಾಂ ರಾಷ್ಟ್ರೀಯ ಪೌರತ್ವ ನೋಂದಣಿಯ (ಎನ್‌ಆರ್‌ಸಿ) ಅಂತಿಮ ಪಟ್ಟಿಯಿಂದ ಕೈಬಿಟ್ಟಿರುವವರ ಹೆಸರುಗಳನ್ನು ಆಗಸ್ಟ್‌ 31ರಂದು ಆನ್‌ಲೈನ್‌ನಲ್ಲಿ ಮಾತ್ರ ಪ್ರಕಟಿಸಬೇಕು ಎಂದು ಸುಪ್ರೀಂ ಕೋರ್ಟ್‌ ಆದೇಶಿಸಿದೆ.

‘ಆಧಾರ್‌’ ಮಾಹಿತಿ ರೀತಿಯಲ್ಲಿ ಅಸ್ಸಾಂನ ಎನ್‌ಆರ್‌ಸಿ ಮಾಹಿತಿ ಪಡೆಯಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದೆ.

ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ಮತ್ತು ನ್ಯಾಯಮೂರ್ತಿ ಆರ್‌.ಎಫ್‌. ನಾರಿಮನ್‌ ಅವರನ್ನೊಳಗೊಂಡ ಪೀಠವು, ಈ ಆದೇಶ ನೀಡಿದೆ.

ಅಸ್ಸಾಂ ವಿಧಾನಸಭೆ ಒಳಗೆ ಮತ್ತು ಹೊರಗೆ ಎನ್‌ಆರ್‌ಸಿ ಕುರಿತು ಕೇಳಿಬಂದಿರುವ ಟೀಕೆಗಳನ್ನು ಪೀಠವು ತಳ್ಳಿಹಾಕಿದ್ದು, ಅಗಸ್ಟ್‌ 31ರ ಗಡುವು ಪಾಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

 

Post Comments (+)