ಬಿಹಾರದ ಸಮಾಜ ಕಲ್ಯಾಣ ಸಚಿವೆ ಮಂಜು ವರ್ಮಾ ರಾಜೀನಾಮೆ  

7

ಬಿಹಾರದ ಸಮಾಜ ಕಲ್ಯಾಣ ಸಚಿವೆ ಮಂಜು ವರ್ಮಾ ರಾಜೀನಾಮೆ  

Published:
Updated:

ಪಟನಾ: ಮುಜಪ್ಫರಪುರ ಪುನರ್ವಸತಿ ಕೇಂದ್ರದಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ತಮ್ಮ ಪತಿಯ ಹೆಸರು  ಕೇಳಿ ಬಂದಿರುವುದರಿಂದ ಬಿಹಾರದ ಸಮಾಜ ಕಲ್ಯಾಣ ಸಚಿವೆ ಮಂಜು ವರ್ಮಾ ಬುಧವಾರ ರಾಜೀನಾಮೆ ನೀಡಿದ್ದಾರೆ.
ಪ್ರಸ್ತುತ ಪ್ರಕರಣದಲ್ಲಿ ಮಂಜು ಅವರ ಪತಿ ಬ್ರಜೇಶ್ ಠಾಕೂರ್ ಹೆಸರು ಕೇಳಿ ಬಂದಿದ್ದು, ಸಚಿವೆ ವಿರುದ್ದ ಟೀಕಾ ಪ್ರಹಾರ ನಡೆದಿತ್ತು.

ಬುಧವಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಭೇಟಿ ಮಾಡಿ, ಮಂಜು ರಾಜೀನಾಮೆ ನೀಡಿದ್ದಾರೆ ಎಂದು ಮುಖ್ಯಮಂತ್ರಿಯವರ ಕಚೇರಿ ಮೂಲಗಳು ಹೇಳಿವೆ. ವರ್ಮಾ ಅವರ ಮೇಲಿರುವ ಆರೋಪವನ್ನು ಈ ಹಿಂದೆ ನಿತೀಶ್ ಕುಮಾರ್  ನಿರಾಕರಿಸಿದ್ದರು.

ಈ ಪ್ರಕರಣದಲ್ಲಿ ಸಚಿವೆಯ ಸಂಬಂಧಿಕರು ಯಾರಾದರೂ ಭಾಗಿಯಾಗಿದ್ದರೆ ಅವರನ್ನು ಸಮ್ಮನೆ ಬಿಡುವುದಿಲ್ಲ. ಆದರೆ ಇಂಥಾ ವಿಷಯಗಳನ್ನು ಈಗ ಚರ್ಚಿಸುತ್ತಿರುವುದು ಯಾಕೆ? ನಾವು ಮಂಜು ಅವರಿಗೆ ಕರೆ ಮಾಡಿದ್ದೆವು. ಆರೋಪಗಳನ್ನು ಅವರು ನಿರಾಕರಿಸಿದ್ದಾರೆ. ನಿರಾಧಾರ ಆರೋಪಗಳನ್ನು ಯಾಕೆ ಮಾಡುತ್ತೀರಿ ಎಂದು ನಿತೀಶ್ ಕುಮಾರ್ ಪ್ರಶ್ನಿಸಿದ್ದರು.

 ಮುಜಪ್ಫರಪುರ ಪುನರ್ವಸತಿ ಕೇಂದ್ರದಲ್ಲಿ 34 ಹೆಣ್ಣು ಮಕ್ಕಳ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಪ್ರಕರಣದ ತನಿಖೆ ಸಿಬಿಐ ನಡೆಸುತ್ತಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !