ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಚ್‌ ಹುದ್ದೆಗೆ ಜಿದಾನ್‌ ರಾಜೀನಾಮೆ

Last Updated 31 ಮೇ 2018, 19:30 IST
ಅಕ್ಷರ ಗಾತ್ರ

ಮ್ಯಾಡ್ರಿಡ್‌: ರಿಯಲ್‌ ಮ್ಯಾಡ್ರಿಡ್‌ ಫುಟ್‌ಬಾಲ್‌ ಕ್ಲಬ್‌ನ ಕೋಚ್‌ ಜಿನೆಡಿನ್‌ ಜಿದಾನ್‌ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಗುರುವಾರ ಘೋಷಿಸಿದ್ದಾರೆ.

‘ಮುಂದಿನ ಋತುವಿನಿಂದ ರಿಯಲ್‌ ಮ್ಯಾಡ್ರಿಡ್‌ ಕೋಚ್‌ ಹುದ್ದೆಯಲ್ಲಿ ಮುಂದುವರಿಯದಿರಲು ನಿರ್ಧರಿಸಿದ್ದೇನೆ. ಇತರ ಕ್ಲಬ್‌ಗಳಿಗೆ ಕೋಚ್‌ ಆಗುವ ಬಗ್ಗೆ ಸದ್ಯ ಯಾವುದೇ ತೀರ್ಮಾನ ಕೈಗೊಂಡಿಲ್ಲ’ ಎಂದು ಅವರು ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

‘2020ರವರೆಗೆ ಕೋಚ್‌ ಹುದ್ದೆ ನಿರ್ವಹಿಸಲು ಕ್ಲಬ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಆದರೆ, ಈಗಾಗಲೇ ಸುಮಾರು ಮೂರು ವರ್ಷಗಳ ಕಾಲ ಕ್ಲಬ್‌ ಅನ್ನು ಮುನ್ನಡೆಸಿದ್ದೇನೆ. ಹುದ್ದೆಯಿಂದ ಕೆಳಗಿಳಿದು ಇತರರಿಗೆ ಅವಕಾಶ ಮಾಡಿಕೊಡಲು ಇದು ಸಕಾಲ. ರಿಯಲ್‌ ಮ್ಯಾಡ್ರಿಡ್‌ನ ಆಟಗಾರರಿಗೆ ಇನ್ನು ಭಿನ್ನ ಮಾದರಿಯ ತರಬೇತಿಯ ಅಗತ್ಯವಿದೆ’ ಎಂದು ಅವರು ತಿಳಿಸಿದ್ದಾರೆ.

‘ಇತ್ತೀಚೆಗೆ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಕ್ಲಬ್‌ ತೊರೆಯುವುದಾಗಿ ಇಂಗಿತ ವ್ಯಕ್ತಪಡಿಸಿದ್ದರು. ಆದರೆ, ಅದಕ್ಕೂ ನನ್ನ ನಿರ್ಧಾರಕ್ಕೂ ಯಾವುದೇ ಸಂಬಂಧವಿಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT