ಶನಿವಾರ, ಜನವರಿ 18, 2020
20 °C

ಸಿಎಎ ವಿರೋಧಿಸಿದರೆ ಜೀವಂತ ಸಮಾಧಿ: ಬಿಜೆಪಿ ಮುಖಂಡ ರಘುರಾಜ್‌ ಸಿಂಗ್‌

ಪಿಟಿಐ Updated:

ಅಕ್ಷರ ಗಾತ್ರ : | |

ಅಲಿಗಡ : ಸಿಎಎ ವಿರೋಧಿಸುವ ಪ್ರತಿಭಟನಕಾರರನ್ನು ಜೀವಂತ ಸಮಾಧಿ ಮಾಡುವುದಾಗಿ ಬಿಜೆಪಿ ಮುಖಂಡ ರಘುರಾಜ್‌ ಸಿಂಗ್‌ ವಿವಾದಿತ ಹೇಳಿಕೆ ನೀಡಿದ್ದಾರೆ. 

ಪೌರತ್ವ (ತಿದ್ದುಪಡಿ) ಕಾಯ್ದೆ ಪರ ಜಾಗೃತಿ ಮೂಡಿಸಲು ಇಲ್ಲಿ ಹಮ್ಮಿಕೊಂಡಿದ್ದ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಭ್ರಷ್ಟಾಚಾರಿಗಳು, ಅಪರಾಧ ಹಿನ್ನೆಲೆ ಇರುವ ಶೇ 1ರಷ್ಟು ಮಂದಿ ಪ್ರಧಾನಿ, ಮುಖ್ಯಮಂತ್ರಿ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ. ದಾವೂದ್‌ ಇಬ್ರಾಹಿಂನಿಂದ ಹಣ‍ ಪಡೆದು ಅಧಿಕಾರಿಗಳಿಗೆ ತೊಂದರೆ ನೀಡುತ್ತಾರೆ. ಸಿಎಎ ಅನ್ನು ವಿರೋಧಿಸುವವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ ಎಂದಿದ್ದಾರೆ. 

ರಘುರಾಜ್‌ ಸಿಂಗ್‌ ಅವರ ವಿವಾದಿತ ಹೇಳಿಕೆಯಿಂದ ಬಿಜೆಪಿ ಅಂತರ ಕಾಯ್ದುಕೊಂಡಿದೆ. ಸಿಂಗ್‌ ಅವರು ಸಚಿವರೂ ಅಲ್ಲ. ಶಾಸಕರೂ ಅಲ್ಲ ಎಂದು ಪಕ್ಷದ ವಕ್ತಾರ ಚಂದ್ರಮೋಹನ್‌ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ, ಸಿಂಗ್‌ ಅವರು ಕಾರ್ಮಿಕ ಇಲಾಖೆಯ ಸಲಹೆಗಾರರಾಗಿದ್ದಾರೆ ಎಂದು ಕಾರ್ಮಿಕ ಕಲ್ಯಾಣ ಸಮಿತಿ ಅಧ್ಯಕ್ಷ ಸುನಿಲ್‌ ಭರಲಾ ಹೇಳಿದ್ದಾರೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು